

ಮುಂಬೈ: ತಮ್ಮ ಪಿಪಿಇ ಕಿಟ್‌ಗಳನ್ನು ನಗರ ಮೂಲದ ಕಾಮಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಖುಷಿ ತಂದಿದೆ ಎಂದು ನಟ, ಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ತಿಳಿಸಿದ್ದಾರೆ.
ಕರೋನವೈರಸ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ವೃತ್ತಿಪರರಿಗಾಗಿ 1000 ಪಿಪಿಇ ಕಿಟ್‌ಗಳನ್ನು ಕೊಡುಗೆ ನೀಡುವುದಾಗಿ ನಟ ಫರ್ಹಾನ್ ಅಖ್ತರ್ ಇತ್ತೀಚೆಗೆ ಘೋಷಿಸಿದ್ದರು.
ಇದನ್ನೂ ಓದಿ : ಶಾಲಾ ಆವರಣ ಗೋಡೆಗಳ ಮೇಲೀಗ ಕರೊನಾ ಜಾಗೃತಿ ಚಿತ್ರಗಳು
ಹೆಚ್ಚುವರಿ 1000 ಪಿಪಿಇ ಕಿಟ್‌ಗಳಿಗಾಗಿ ಹಣ ಸಂಗ್ರಹಿಸಲು ಅವರು ವಿವಿಧ ಕಾರ್ಯಗಳಲ್ಲಿ ಸಹಭಾಗಿಯಾಗಿದ್ದಾರೆ.
ಆಸ್ಪತ್ರೆಗೆ ಕಳುಹಿಸಲು ಸಿದ್ಧವಾಗಿರುವ ಪೆಟ್ಟಿಗೆಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಫರ್ಹಾನ್ ಹಂಚಿಕೊಂಡಿದ್ದಾರೆ.
“ನಮ್ಮ ಪಿಪಿಇ ಕಿಟ್‌ಗಳನ್ನು ಮುಂಬೈನ ಕಾಮಾ ಆಸ್ಪತ್ರೆಗೆ ನೀಡಲಾಗುತ್ತದೆ ಎಂದು ತಿಳಿಸಲು ಸಂತೋಷವಾಗಿದೆ.
ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆಗಳು. ಮುಂಚೂಣಿಯಲ್ಲಿರುವ ನಮ್ಮ ವೈದ್ಯರನ್ನು ಸುರಕ್ಷಿತವಾಗಿಡಲು ಇದು ಸಹಾಯ ಮಾಡುತ್ತದೆ ಎಂದು ಬರೆದಿದ್ದಾರೆ. ಜನರು ಇಂಥ ಕಾರ್ಯಕ್ರಮಕ್ಕೆ ಹೆಚ್ಚಿನ ಕೊಡುಗೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ.