ದೀಪಿಕಾ ಜೊತೆ ಇದ್ದ ಭಿನ್ನಾಭಿಪ್ರಾಯ ತಳ್ಳಿಹಾಕಿದ ನಿರ್ದೇಶಕಿ ಫರಾ​ ಖಾನ್ |Bollywood

untitled-design-2025-09-30t112101230-68db6fdb51fce
Published on

Bollywood: ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅವರ 8 ಗಂಟೆಗಳ ಮಾತ್ರ ಕೆಲಸ ಮಾಡುವುದಾಗಿ ಬೇಡಿಕೆ ಇಟ್ಟ ನಂತರ, ನಿರ್ದೇಶಕಿ ಫರಾ​ ಖಾನ್ ಟೀಕೆಯಿಂದ ಭಿನ್ನಾಭಿಪ್ರಾಯ ಉಂಟಾಗಿ ಇವರಿಬ್ಬರು ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಒಬ್ಬರನ್ನೊಬ್ಬರು ಅನ್​ಫಾಲೋ ಮಡುತ್ತಿದ್ದಾರೆ ಎಂಬ ವದಂತಿ ಇತ್ತೀಚೆಗೆ ಇಂಟರ್ನೆಟ್​ನಲ್ಲಿ ಹರಿದಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಫರಾ​ ಮೌನ ಮುರಿದಿದ್ದು, ದೀಪಿಕಾ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ವದಂತಿ ತಳ್ಳಿ ಹಾಕಿದ್ದಾರೆ.

ಪಿಂಕ್ವಿಲ್ಲಾಗೆ ನಿಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಫರಾ ಮೊದಲಿಗೆ ನಾವು ಒಬ್ಬರೊಬ್ಬರು ಫಾಲೋ ಮಾಡುತ್ತಿರಲಿಲ್ಲ. ಹ್ಯಾಪಿ ನ್ಯೂ ಇಯರ್​ ಚಿತ್ರೀಕರಣ ಸಮಯದಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಸಂವಹನ ಮಾಡುವುದಿಲ್ಲ. ಬದಲಿಗೆ ನೇರ ನೇರ ಮಾತುಕತೆ ಎಂದು ಒಪ್ಪಂದ ಮಾಡಿಕೊಂಡೆದ್ದೆವು. ಆದರೆ, ಈ ಒಪ್ಪಂದ ದೀಪಿಕಾಗೆ ಇಷ್ಟವಾಗಲಿಲ್ಲ. ಆ ಕಾರಣ ಹುಟ್ಟು ಹಬ್ಬದ ವಿಶ್​ನ್ನು ಸಹ ಇನ್​ಸ್ಟಾಗ್ರಾಮ್​ನಲ್ಲಿ ತಿಳಿಸುವುದಿಲ್ಲ ಎಂದು ಬಹಿರಂಗ ಪಡಿಸಿದರು.

ದೀಪಿಕಾ ವಿರುದ್ಧ 8 ಗಂಟೆಗಳ ಶಿಪ್ಟ್​ ಬಗ್ಗೆ ವದಂತಿಗಳ ಬಗ್ಗೆ ಮಾತನಾಡಿದ ಫರಾ, ನನ್ನ ಕಮೆಂಟ್​ ದೀಪಿಕಾ ಅವರಿಗೆ ಹೇಳಲು ಮಾಡಿದ್ದಲ್ಲ. ಬದಲಿಗೆ ದಿಲೀಪ್​ ಕೂಡಾ 8 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿ ಎಂದಾಗಿತ್ತು. ಏಕೆಂದರೆ ಅವರು ಕೇವಲ 2 ಗಂಟೆಗಳ ಕಾಲ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದ ಎಂದು ಹೇಳಿದರು.

ಇನ್ನು ದೀಪಿಕಾಳ ಮಗಳು ದುವಾ ಜನಿಸಿದ ನಂತರ ಆಕೆಯನ್ನು ನೋಡಲು ಹೋದ ಕೆಲವು ಜನರಲ್ಲಿ ನಾನು ಒಬ್ಬಳು. ಇನ್ಸ್​ಸ್ಟಾಗ್ರಾಮ್​ ಹಾಗೂ ಪ್ಯಾಪ್​ಗಳಲ್ಲಿ ಎಲ್ಲವೂ ಆಗುವುದಿಲ್ಲ. ಈ ರೀತಿಯಾಗಿ ಸುಳ್ಳು ವದಂತಿಗಳು ಹರಡುವುದು ಮೊದಲು ನಿಲ್ಲಬೇಕು ಎಂದರು.

ಈ ರೀತಿಯ ವದಂತಿಗಳು ಜನರ ನಡುವೆ ಸಮಸ್ಯೆಯನ್ನು ಹುಟ್ಟುಹಾಕುತ್ತವೆ. ಇಂತಹ ವಿಷಯಗಳು ಇನ್ನಷ್ಟು ಹದಗೆಡುವ ಮೊದಲು ನಿರ್ಮಾಪಕರು ಮತ್ತೊಬ್ಬ ವ್ಯಕ್ತಿಗೆ ಕರೆ ಮಾಡುವಂತಹ ಸಂದರ್ಭ ಬಂದಿದೆ. ಆದರಿಂದ ಜನರು ಈ ರೀತಿಯ ವದಂತಿಗಳನ್ನು ಹರಡುವುದನ್ನು ಬಿಡಬೇಕು ಎಂದು ತಿಳಿಸಿದ್ದಾರೆ.

ದೀಪಿಕಾ ಮತ್ತು ಫರಾ ಓಂ ಶಾಂತಿ ಓಂ ಮತ್ತು ಹ್ಯಾಪಿ ನ್ಯೂ ಇಯರ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಎರಡೂ ಚಿತ್ರಗಳು ಸೂಪರ್​ ಹಿಟ್​ ಆಗಿ ಹೊರಹೊಮ್ಮಿದ್ದಾವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net