ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಬೇಕು ಎಂದು 'ದೆಹಲಿ ಚಲೋ' ಎಂದ ಅಭಿಮಾನಿಗಳು!

ಸಿದ್ದರಾಮಯ್ಯ siddaramaiah
ಮಾಜಿ ಸಿಎಂ ಸಿದ್ದರಾಮಯ್ಯ
Published on

ಬಾಗಲಕೋಟೆ: ಇತ್ತೀಚೆಗೆ ಸಿದ್ದರಾಮಯ್ಯ ಅಭಿಮಾನಿಗಳು ಬೆಂಗಳೂರಿನಲ್ಲಿರುವ ಅವರ ನಿವಾಸಕ್ಕೆ 4 ಸಾವಿರ ಸಂಖ್ಯೆಯಲ್ಲಿ ತೆರಳಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಡ ಹೇರಿದ್ದರು.

ಸಿದ್ದರಾಮಯ್ಯ ಬಾದಾಮಿ ಬಿಟ್ಟು ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಹಿನ್ನಲೆಯಲ್ಲಿ ಬಾದಾಮಿ ಕ್ಷೇತ್ರದ ಅಭಿಮಾನಿಗಳಿಂದ ಮತ್ತೊಂದು ಪ್ರಯತ್ನ ನಡೆಯುತ್ತಿದೆ. ಈ ಬಾರಿ ಅಭಿಮಅನಿಗಳು ನೇರವಾಗಿ ಹೈಕಮಾಂಡ್ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ.

ಇದೀಗ ಸಿದ್ದು ಬೆಂಬಲಿಗರಿಂದ ದೆಹಲಿ ಚಲೋ ನಿರ್ಧಾರವಾಗಿದ್ದು ಅತೀ ಶೀಘ್ರದಲ್ಲೇ ದೆಹಲಿ ಚಲೋ ಅಭಿಯಾನ ಆರಂಭಿಸಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಬಳಿ ಅಭಿಮಾನಿಗಳು ಬಂದಾಗ ಬಾದಾಮಿ, ವರುಣ, ಕೋಲಾರ ಈ ಮೂರರಲ್ಲಿ ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿಂದ ಸ್ಪರ್ಧೆ ಎಂದಿದ್ದರು.

fans to start dehli chalo for siddaramaiah
ಸಿದ್ದರಾಮಯ್ಯ ಅಭಿಮಾನಿಗಳಿಂದ ದೆಹಲಿ ಚಲೋ

ಈ ಹಿನ್ನೆಲೆಯಲ್ಲಿ ಈಗ ಬಾದಾಮಿಯಿಂದಲೇ ಸ್ಪರ್ಧಿಸಿ ಎಂದು ಹೈಕಮಾಂಡ್ ಸೂಚಿಸುವಂತೆ ಒತ್ತಡ ಹಾಕಲು ಅಭಿಮಾನಿಗಳು ದೆಹಲಿ ಚಲೋ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಕಾಂಗ್ರೆಸ್ ಚುನಾವಣಾ ಸಮಿತಿಯ ಸದಸ್ಯರನ್ನೆಲ್ಲಾ ಸಿದ್ಧರಾಮಯ್ಯನವರ ಅಭಿಮಾನಿಗಳು ಭೇಟಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net