ಸಿಎಂ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟ ವ್ಯಕ್ತಿಗೆ ಅಭಿಮಾನಿಗಳಿಂದ ಕಪಾಳಮೋಕ್ಷ

Siddaramaiah
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ ವ್ಯಕ್ತಿಯನ್ನು ಅಭಿಮಾನಿಗಳು ಹಿಡಿದು ಥಳಿಸಿರುವ ಘಟನೆ ನಗರದ ಕೆ. ಪಿ. ಅಗ್ರಹಾರದಲ್ಲಿ ನಡೆದಿದೆ.

ಒದೆ ತಿಂದ ವ್ಯಕ್ತಿಯು ಸಿದ್ದರಾಮಯ್ಯ ಅವರ ಫೋಸ್ಟರ್ ನೋಡಿ ಬೈಯ್ಯುತ್ತಿದ್ದನು. ಈ ವೇಳೆ ಆತನ ದುರ್ವರ್ತನೆ ಕಂಡ ಸಿದ್ದು ಅಭಿಮಾನಿಗಳು, ಆತನನ್ನು ಸೆರೆಹಿಡಿದು ಕಪಾಳಕ್ಕೆ ಬಾರಿಸಿದರು. ಬಳಿಕ ಪೋಸ್ಟರ್​ ಬಳಿ ಕರೆದೊಯ್ದು ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಈ ವೇಳೆಯೂ ಆ ವ್ಯಕ್ತಿ ನಾಲಿಗೆ ಹರಿಬಿಟ್ಟಿದ್ದಕ್ಕೆ ಅಭಿಮಾನಿಗಳು ಥಳಿಸಿದರು.

ಸಿಎಂ ಸಿದ್ದರಾಮಯ್ಯ ಅಲ್ಲದೇ, ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆಯೂ ಅವಾಚ್ಯ ಶಬ್ದಗಳಿಂದ ಆ ನಿಂದಿಸುತ್ತಿದ್ದ. ಕ್ಷಮೆ ಕೇಳಿದ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net