ಸೆಂಚುರಿ ಸ್ಟಾರ್​​ ನಟ ಶಿವರಾಜ್​​ಕುಮಾರ್​​ ಜನ್ಮದಿನಕ್ಕೆ ಕ್ಷಣಗಣನೆ; ಸಂಭ್ರಮಕ್ಕೆ ಫ್ಯಾನ್ಸ್​​ ತಯಾರಿ

shivarajkumar
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್​​ ಅವರ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಅಭಿಮಾನಿಗಳು ಕೇಕ್​, ಹೂವಿನ ಹಾರಗಳೊಂದಿಗೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಇಂದು ಮಧ್ಯರಾತ್ರಿ 12 ಗಂಟೆಗೆ ನಟ ಶಿವರಾಜ್​​ಕುಮಾರ್​​ ನಿವಾಸದ ಬಳಿ ಪಟಾಕಿ ಸಿಡಿಸಿ, ಕೇಕ್ ಕಟ್ ಮಾಡಿ ಸಂಭ್ರಮಿಸಲು ಅಭಿಮಾನಿಗಳು ಕಾತುರದಿಂದ ಕಾಯತೊಡಗಿದ್ದಾರೆ. ಜುಲೈ 12ರ ಬೆಳಗ್ಗೆ 8 ರಿಂದ 10 ಗಂಟೆಯವರೆಗೂ ಅಭಿಮಾನಿಗಳನ್ನು ಭೇಟಿ ಮಾಡಲಿರುವ ಸೆಂಚುರಿ ಸ್ಟಾರ್​, 11 ಗಂಟೆಗೆ ಡಾ.ರಾಜ್​​ಕುಮಾರ್​​ ಅವರ ಸಮಾಧಿಗೆ ಭೇಟಿ‌ ನೀಡಲಿದ್ದಾರೆ. ತದನಂತರ ತಮ್ಮ ಮುಂದಿನ 'ಗೋಸ್ಟ್' ಚಿತ್ರದ ಫಸ್ಟ್ ಲುಕ್ ಅನ್ನು ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಗೊಳಿಸಲಿದ್ದಾರೆ.

ಪೋಸ್ಟರ್​ ರಿಲೀಸ್​ ಬಳಿಕ ಮಧ್ಯಾಹ್ನ 2 ಗಂಟೆಗೆ ಮನೆಯ ಬಳಿ ಶುಭಾಶಯ ತಿಳಿಸಲು ಬಂದ ಅಭಿಮಾನಿಗಳಿಗೆ ಉಪಹಾರ ನೀಡುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ನಟ ಶಿವರಾಜ್​​ಕುಮಾರ್​​ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ಸಹಸ್ರಾರು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net