ಮದುವೆ ಆಮಂತ್ರಣ ಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ; ಕಾರಣವೇನು ಗೊತ್ತಾ?

viral News
Published on

ನವದೆಹಲಿ: ಮದುವೆ ಜೀವನದ ದೊಡ್ಡ ತಿರುವು. ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಬಯಸುತ್ತಾರೆ. ಇಲ್ಲೊಂದು ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ವಿಶೇಷವಾಗಿ, ವಿಶಿಷ್ಟವಾಗಿ ಮೋದಿ ಫೋಟೋವನ್ನು ಪ್ರಿಂಟ್​​ ಮಾಡಲಾಗಿದೆ.

ಸಂಗಾರೆಡ್ಡಿ ಜಿಲ್ಲೆಯ ಪಠಾಣ್ ಚೆರುವಿನ ವ್ಯಕ್ತಿಯೊಬ್ಬರು ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸಿದ, ಮದುವೆ ಕಾರ್ಡ್ ಈಗ ವೈರಲ್ ಆಗಿದೆ.

ನಂದಿಕಾಂತಿ ನರಸಿಂಹ ಪಟಾನ್ ಚೆರುವಿನಲ್ಲಿ ಬಾಂಗ್ ಡೀಲರ್. ಇವರು ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿ. ನರಸಿಂಹ ಅವರ ಪುತ್ರ ಸಾಯಿಕುಮಾರ್ ಮದುವೆ ಪತ್ರಿಕೆಗಳಲ್ಲಿ ನರೇಂದ್ರ ಮೋದಿ ಅವರ ಚಿತ್ರ ಮುದ್ರಿಸಿ, ‘ನನ್ನ ಮದುವೆಗೆ ನಿಮ್ಮ ಉಡುಗೊರೆ ನರೇಂದ್ರ ಮೋದಿ ಅವರಿಗೆ ಮತ ನೀಡಿ’ ಎಂದು ಮೋದಿ ಅವರ ಫೋಟೋವನ್ನು ಮುದ್ರಿಸಿ ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಕುಟುಂಬಕ್ಕೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಮದುವೆಗೆ ಬರುವವರು ವಿಶೇಷ ಉಡುಗೊರೆಗಳನ್ನು ನೀಡುವ ಅಗತ್ಯವಿಲ್ಲ, ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದ್ದಾರೆ. ಈ ಮದುವೆಯ ಪತ್ರಿಕೆಯನ್ನು ಬಿಜೆಪಿ ಪಕ್ಷದ ನಾಯಕರು ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net