ಮಹಿಳೆಗೆ 19 ಲಕ್ಷ ರೂ. ವಂಚಿಸಿದ ಖ್ಯಾತ ಯೂಟ್ಯೂಬರ್ ಪಿಯೂಷ್ ಕಟ್ಯಾಲ್ ಅರೆಸ್ಟ್​​ | YouTuber

YouTuber
Published on

YouTuber: ವೈದ್ಯಕೀಯ ತುರ್ತು ಪರಿಸ್ಥಿತಿಯ ನೆಪದಲ್ಲಿ 45 ವರ್ಷದ ಮಹಿಳೆಯಿಂದ ಸುಮಾರು 19 ಲಕ್ಷ ರೂ.ವಂಚಿಸಿದ ಆರೋಪದ ಮೇಲೆ ದೆಹಲಿ ಮೂಲದ ಯೂಟ್ಯೂಬರ್​​​ ಕಟ್ಯಾಲ್​​ನ್ನು ಮುಂಬೈ ಸೈಬರ್​​​ ಪೊಲೀಸರು ಬಂಧಿಸಿದ್ದಾರೆ.

ಯೂಟ್ಯೂಬ್‌ನಲ್ಲಿ ಕಾಮಿಡಿ ವೀಡಿಯೊಗಳನ್ನು ಮಾಡಿ ಫೇಮಸ್​​​ ಆಗಿದ್ದ ಪಿಯೂಷ್ ಕತ್ಯಾಲ್ ಸಾಮಾಜಿಕ ಮಾಧ್ಯಮದಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ವಂಚನೆಗೆ ಒಳಗಾದ ಯುವತಿ ಸುಮಾರು 4 ರಿಂದ 5 ತಿಂಗಳ ಹಿಂದೆ ಅವರ ವಿಡಿಯೋಗಳನ್ನು ನೋಡಿದ ನಂತರ ಖಾತೆಯನ್ನು ಫಾಲೋ ಮಾಡಲು ಪ್ರಾರಂಭಿಸಿದರು. ನಂತರ ಇಬ್ಬರು ಸಾಮಾಜಿಕ ಮಾಧ್ಯಮ ಕಾಮೆಂಟ್​​ಗಳ ಮೂಲಕ ಸಂಪರ್ಕ ಹೊಂದಿ, ಫೋನ್​ ನಂಬರ್​​​ಗಳನ್ನು ಎಕ್ಸ್ಚೇಂಜ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರದಲ್ಲಿ ಪಿಯೂಷ್​​​ ವಿವಿಧ ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಹೇಳಿ ಅವಳಿಂದ ಹಣ ಕೇಳಲು ಪ್ರಾರಂಭಿಸಿದ್ದಾನೆ. ಅವನ ಮಾತು ನಿಜವೆಂದು ತಿಳಿದು ಅವನಿಗೆ ಹಣ ಸಹಾಯ ಮಾಡಿದಳು.

ತದನಂತರದಲ್ಲಿ ಅವಳು ಆತನು ಹೆಚ್ಚಿನ ಹಣವನ್ನು ಕೇಳಿದಾಗ ಹಣವನ್ನು ಕೊಡಲು ಆಕೆ ಹಿಂಜರಿಯುತ್ತಾಳೆ. ಆದರೆ ಕಟ್ಯಾಲ್ ಅವರ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಜೊತೆಗೆ ತನಗೆ ಪೊಲೀಸರೊಂದಿಗೆ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದ.

ಕೊನೆಗೆ ಇದರಿಂದ ಪಾರಾಗಲು ಮಹಿಳೆ ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದಳು. ಮಹಿಳೆ ಕೊಟ್ಟ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿ ದೆಹಲಿಯಿಂದ ಕಟ್ಯಾಲ್‌ನನ್ನು ಬಂಧಿಸಿ, ತನಿಖೆ ಮುಂದುವರಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net