ಕುಡಿತ ಚಟದಿಂದ ಕುಟುಂಬದ ನೆಮ್ಮದಿ ಹಾಳು

47
Published on

ಕಳಸ್ತವಾಡಿಯ ಸಂಕಲ್ಪಸೌಧ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 1864ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಗುರುವಾರ ಆಯೋಜಿಸಲಾಗಿತ್ತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚೇತನ್ ವಿಷಕಂಠೇಗೌಡ ಮಾತನಾಡಿ, ಕುಡಿತ ಚಟದಿಂದ ಕುಟುಂಬದ ನೆಮ್ಮದಿಯ ಜತೆಗೆ ಆರ್ಥಿಕವಾಗಿ ಹಿನ್ನಡೆಯಾಗುತ್ತದೆ. ಆರೋಗ್ಯವು ಹದಗೆಡುತ್ತದೆ ಎಂದು ಹೇಳಿದರು.
ದುಶ್ಚಟಮುಕ್ತ ಸವಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕೈಗೊಂಡಿರುವ ಬಹುಮುಖ್ಯ ಕಾರ್ಯಕ್ರಮವಾಗಿದೆ. ಮಹಾತ್ಮ ಗಾಂಧಿ ಅವರು ಮದ್ಯಪಾನ, ಧೂಮಪಾನ, ತಂಬಾಕು ಪದಾರ್ಥಗಳ ಸೇವನೆ, ಜೂಜು ಮುಂತಾದವುಗಳನ್ನು ವಿರೋಧಿಸಿದ್ದರು. ಈ ದಿಸೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ವಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಹ ಸಂಕಲ್ಪ ತೊಟ್ಟು ಗಾಂಧೀಜಿಯ ಕನಸುಗಳನ್ನು ನನಸು ವಾಡುವ ಪ್ರಯತ್ನ ವಾಡುತ್ತಿದ್ದಾರೆ ಎಂದರು.
ಶಾಸಕ ಹರೀಶ್‌ಗೌಡ, ವಿಜಯವಾಣಿ ಮೈಸೂರು ಬ್ಯುರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ, ನಿರ್ದೇಶಕ ವಿ.ವಿ.ಜಯ್‌ಕುವಾರ್ ನಾಗನಾಳ, ಜಿಲ್ಲಾ ಜನಜಾಗತಿ ವೇದಿಕೆಯ ಅಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಮೈಸೂರು ಚೇಂಬರ್ ಆಫ್ ಕಮ್ಯುನಿಟಿ ನಿರ್ದೇಶಕ ಲಿಂಗರಾಜು, ಯೋಜನಾಧಿಕಾರಿ ಶಕುಂತಳಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net