ಮಹಾಕುಂಭಮೇಳದಲ್ಲಿ ಚಿಕನ್ ಸಾಂಬಾರ್​ ಮಾಡಿದ್ರು! ನೆಲಕ್ಕೆ ಚೆಲ್ಲಿ..ಟೆಂಟ್ ಧ್ವಂಸಗೊಳಿಸಿದ ಬಾಬಾ...Family Cooks Chicken in Maha Kumbh

Family Cooks Chicken in Maha Kumbh
Published on

Family Cooks Chicken in Maha Kumbh:  ಮಹಾ ಕುಂಭಮೇಳ ಯಾತ್ರೆಯು ಜನವರಿ 13 ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಯಿತು ಮತ್ತು ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಕೊನೆಗೊಳ್ಳಲಿದೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ದೇಶ ವಿದೇಶಗಳಿಂದ ಭಕ್ತರು ಹರಿದು ಬರುತ್ತಿದ್ದಾರೆ.

ಪ್ರಯಾಗರಾಜ್​ನಲ್ಲಿ ಕುಂಭಮೇಳಕ್ಕೆ ಬಂದು ಗಂಗೆಯಲ್ಲಿ ಮಿಂದು ಪಾವನರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕುಂಭಮೇಳಕ್ಕೆ ಬಂದ ಕುಟುಂಭವೊಂದು ಗಂಗೆಯ ದಡದಲ್ಲಿ ಚಿಕನ್ ಅಡುಗೆ ತಯಾರಿಸಿದರು ಎಂದು ಸಾಧು ಒಬ್ಬರು ಕೋಪಗೊಂಡು ಅವರ ಮೇಲೆ ದಾಳಿ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

 ವಿಡಿಯೋದಲ್ಲಿ ಏನಿದೆ?:  ಗಂಗೆಯ ದಡದಲ್ಲಿ ಮಾಂಸಹಾರ ಬೇಯಿಸಿರುವ ವಿಚಾರವನ್ನು ತಿಳಿದ ಸಾಧು ಕುಟುಂಬದ ಮೇಳೆ ದಾಳಿ ನಡೆಸಿದ ಟೆಂಟ್​ನನ್ನು ಕಿತ್ತು ಎಸೆದು ಮಾಂಸಹಾರ ಬೇಯಿಸುತ್ತಿದ್ದ ಪಾತ್ರೆಯನ್ನು ಬಿಸಾಡಿದ್ದಾರೆ. ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೇ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಧು  ಆ ಕುಟುಂಬದ ಮೇಲೆ ದಾಳಿ ನಡೆಸಿದ ತಯಾರಾಗಿದ್ದ ಚಿಕನ್ ಅಡುಗೆಯನ್ನು ನೆಲಕ್ಕೆ ಎಸೆದ ದೃಶ್ಯ ವಿಡಿಯೋದಲ್ಲಿ ಕಂಡು ಬಂದಿದೆ.

ಮಹಾಕುಂಭಮೇಳ ಎನ್ನುವುದು ಪವಿತ್ರ ಕ್ಷೇತ್ರ ಇಲ್ಲಿ ನೀವು ಚಿಕನ್ ಬೇಯಿಸಿ ತಿನ್ನುವುದು ಪಾಪಕ್ಕೆ ಸಮ, ಇದು ಒಪ್ಪುವಂತಹದ್ದಲ್ಲ ಎಂದು ಸಾಧು ಅವರನ್ನು ನಿಂದಿಸಿದ್ದಾರೆ.

ಅಲ್ಲಿ ಅವರು ಮಾಡಿದ್ದು ತಪ್ಪು ಆದರೆ ಒಬ್ಬ ಸಾಧು ಎನಿಸಿಕೊಂಡವರು ಹೀಗೆ ವರ್ತನೆ ಮಾಡುವುದು ಕೂಡ ಒಪ್ಪಿಕೊಳ್ಳುವಂತದಲ್ಲ ಎಂದು ನೆಟ್ಟಿಗರು ಈ ವಿಡಿಯೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸೋಶಿಯಲ್​​ ಮೀಡಿಯಾದಲ್ಲಿ ಈ ವಿಡಿಯೋ ಕುರಿತಾಗಿ ಪರ ಹಾಗೂ ವಿರೋಧ ಕಾಮೆಂಟ್​​ಗಳು ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net