

ಶಿವಮೊಗ್ಗ: ಸತ್ಯವನ್ನು ಹೇಳಬೇಕೆಂದು ಹೇಳಿದ ಗಾಂಧಿ ಪ್ರತಿಮೆ ಮುಂದೆ ಸುಳ್ಳಿನ ಪ್ರತಿಭಟನೆ ನಡೆಸಿದ್ದಾರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
18,700 ಕೋಟಿ ರೂ. ಪರಿಹಾರ ಕೇಳಿದ್ದಾಗ ಎನ್‌ಡಿಆರ್‌ಎಫ್‌ನಲ್ಲಿ 4,800 ಕೋಟಿ ರೂ. ಬರುತ್ತದೆಂದು ಸಿಎಂ ಸಿದ್ದರಾಮಯ್ಯ ಅವರೇ ಈ ಹಿಂದೆ ಹೇಳಿದ್ದರು. ಈಗ ಚುನಾವಣೆ ಮುಗಿದ ಮೇಲೆ ಹೇಗೆ ಹಣ ನೀಡುತ್ತಾರೆಂದು ಇನ್ನೂ ಅವರು ನಿರ್ಧಾರ ಮಾಡಿಲ್ಲ. ಹಿಂದೆ ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ 10 ಸಾವಿರ ಕೋಟಿ ರೂ. ನೀಡಿತ್ತು. ಅಪಪ್ರಚಾರ ನಡೆಸಲು ಧರಣಿ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
2004ರಿಂದ 2014ರವರೆಗೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಬರ ಪರಿಹಾರ 19 ಸಾವಿರ ಕೋಟಿ ರೂ. ಕೇಳಿದ್ದರೂ ರಾಜ್ಯಕ್ಕೆ ಸಿಕ್ಕಿದ್ದು 1,200 ಕೋಟಿ ರೂ. ಮಾತ್ರ. ಈಗ ನರೇಂದ್ರ ಮೋದಿ ಸರ್ಕಾರ ಒಂದೇ ವರ್ಷದಲ್ಲಿ 3,800 ಕೋಟಿ ರೂ. ನೀಡಿದೆ. ಕಾಂಗ್ರೆಸ್ ತನ್ನ ವೈಫಲ್ಯವನ್ನು ಕೇಂದ್ರದ ಮೇಲೆ ಹಾಕುತ್ತಿದೆ. ಮುಂದೆ ರಾಜ್ಯ ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ ಎಂದರು.