ಮಾವು ಬೆಲೆ ಕುಸಿತ: ಮೋದಿಗೆ ದೇವೇಗೌಡ ಪತ್ರ | Market intervention urge

DEVEGOUDA
Published on

ಬೆಂಗಳೂರು: ಮುಕ್ತ ಮಾರುಕಟ್ಟೆಯಲ್ಲಿ ಮಾವು ಬೆಲೆ ಕುಸಿದು, ಮಾವು ಬೆಳೆದ ರೈತರು ಸಂಕಷ್ಟದಿಂದ ಪರಿತಪಿಸುತ್ತಿದ್ದಾರೆ. ಮಾವು ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಈ ಕುರಿತು ಪ್ರತ್ಯೇಕ ಪತ್ರ ಬರೆದಿರುವ ಅವರು, ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಯೋಜನೆಯಡಿ ದರ ಕೊರತೆ ಪಾವತಿ ಕಾರ್ಯಕ್ರಮವನ್ನು ತುರ್ತಾಗಿ ಅನುಷ್ಠಾನಗೊಳಿಸಿ, ಕೇಂದ್ರದ ಸಂಸ್ಥೆಗಳಾದ ನಾೆಡ್ ಮತ್ತು ಎನ್‌ಸಿಸಿಎ್ಗೆ ಮಾವು ಖರೀದಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಬೆಲೆ ಕುಸಿತ

ಕರ್ನಾಟಕದ ಬೆಂಗಳೂರು ನಗರ, ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ತೋಟಗಾರಿಕೆ ಬೆಳೆಗಳಲ್ಲಿ ಮಾವು ಮುಖ್ಯ ಬೆಳೆಯಾಗಿದೆ. ಅಂದಾಜು 1.39 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದು, ಮುಂಗಾರು ಹಂಗಾಮಿಗೆ 8-10 ಲಕ್ಷ ಟನ್ ಉತ್ಪಾದನೆಯಾಗಲಿದೆ.

ಮಾವು ಕುಯ್ಲು ಮೇ ಯಿಂದ ಜುಲೈವರೆಗೆ ಗರಿಷ್ಠಮಟ್ಟಕ್ಕೆ ತಲುಪುತ್ತದೆ. ಬೆಳೆದ ಮಾವು ಮಾರಾಟಕ್ಕೆ ರೈತರು ಮಾರುಕಟ್ಟೆಗೆ ತರಲಾರಂಭಿಸಿದ್ದಾರೆ. ಆವಕ ಏರಿಕೆಯಾಗುತ್ತಿದ್ದಂತೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಇಳಿಯಲಾರಂಭಿಸಿದೆ.

ಪ್ರತಿ ಕ್ವಿಂಟಾಲ್‌ಗೆ 12 ಸಾವಿರ ರೂ.ಗಳಿದ್ದದ್ದು ಮೂರು ಸಾವಿರ ರೂ.ಗೆ ಇಳಿದಿದೆ. ಕೃಷಿ ಬೆಲೆ ಆಯೋಗದ ಶಿಾರಸಿನ ಪ್ರಕಾರ ಮಾವು ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲ್‌ಗೆ 5,466 ರೂ.ಗಳಾಗಲಿದೆ.

ಪತ್ರದಲ್ಲಿ ಉಲ್ಲೇಖ

ದಿಢೀರ್ ಬೆಲೆ ಕುಸಿತದಿಂದ ಕಂಗೆಟ್ಟಿರುವ ಸಾವಿರಾರು ಸಣ್ಣ ಹಾಗೂ ಅತಿಸಣ್ಣ ರೈತರು ಕಂಗೆಟ್ಟಿದ್ದಾರೆ. ಈ ಕುರಿತು ರಾಜ್ಯದ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಕೇಂದ್ರ ಎನ್‌ಸಿಸಿಎ್, ನಾೆಡ್‌ನಿಂದ ಬೆಂಬಲ ಬೆಲೆಗೆ ಖರೀದಿಸಲು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೋರಿದ್ದಾರೆ.

ಜತೆಗೆ ನೆರೆಯ ಆಂಧ್ರಪದೇಶ ಚಿತ್ತೂರು ಜಿಲ್ಲೆಗೆ ತೋತಾಪುರಿ ಮಾವು ಸಾಗಣೆ ನಿರ್ಬಂಧ ತೆರವಿಗೂ ಕರ್ನಾಟಕದ ಸಿಎಂ ಪತ್ರ ಬರೆದು, ಆಂಧ್ರಪ್ರದೇಶ ಸಿಎಂ ಗಮನಸೆಳೆದಿದ್ದನ್ನು ಎಚ್.ಡಿ.ದೇವೇಗೌಡ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿ, ತುರ್ತಾಗಿ ರೈತರಿಗೆ ನೆರವಾಗಬೇಕು ಎಂದು ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net