

ನವದೆಹಲಿ: ವಾಟ್ಸ್ಆಪ್ ಮೂಲಕ ಸುಳ್ಳು ಸುದ್ದಿಗಳು ಹಾಗೂ ತಪು್ಪ ಮಾಹಿತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಂದೇಶಗಳ ಫಾರ್ವರ್ಡ್ ಮಿತಿಯನ್ನು ಕೇವಲ ಒಂದು ಚಾಟ್ಗೆ ಸೀಮಿತಗೊಳಿಸಲು ಚಿಂತನೆ ನಡೆದಿದೆ.
ಅಂದರೆ ಬಳಕೆದಾರರು ಯಾವುದೇ ಸಂದೇಶಗಳನ್ನು ಈ ಹಿಂದೆ ಒಂದೇ ಬಾರಿಗೆ ಐದು ಜನರಿಗೆ ಕಳುಹಿಸಬಹುದಾಗಿತ್ತು. ಆದರೆ ಇನ್ನು ಮುಂದೆ ಒಂದು ಬಾರಿಗೆ ಒಬ್ಬರಿಗೆ ಮಾತ್ರ ಸಂದೇಶ ರವಾನಿಸಬಹುದಾಗಿದೆ. ಕರೊನಾ ಕುರಿತು ಭೀತಿ ಹುಟ್ಟಿಸುವ ಮೆಸೇಜ್ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.