

ಬೆಂಗಳೂರು: ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿ ಹೆಸರಿನಲ್ಲಿ ನಕಲಿ ಫ್ರಾಂಕಿಂಗ್ ಯಂತ್ರವನ್ನು ಬಳಕೆ ಮಾಡಿ ದಾಖಲೆ ಪತ್ರಗಳಿಗೆ ಫ್ರಾಂಕಿಂಗ್ ಮುದ್ರೆ ಒತ್ತಿ ಸರ್ಕಾರಕ್ಕೆ ಲಕ್ಷಾಂತರ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಗಾಂಧಿನಗರ ಸಬ್ ರಿಜಿಸ್ಟ್ರಾರ್ ಎಚ್.ಪಿ.ಶಶಿಕಲಾ, ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಆರೋಪಿಗಳಾದ ಅರುಣ್‌ಕುಮಾರ್ ಮತ್ತು ಶಮ ಉನ್ನೀಸಾ ವಿರುದ್ಧ ಎ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಜಿಯಾ ಸುಲೈಮಾನ್ ಪರವಾಗಿ ಅತೀಕ್ ಸುಲೈಮಾನ್ ಜಿಪಿಎ ಪಡೆದಿದ್ದರು. 2017ರ ಆಗಸ್ಟ್ 9ರಂದು ಜಿಪಿಎಗೆ 200 ರೂ. ಮೌಲ್ಯದ ಫ್ರಾಂಕಿಂಗ್ (ನಂಬರ್ 95863) ಆಗಿರುತ್ತದೆ. ಫ್ರಾಂಕಿಂಗ್ ಮಿಷನ್ ಗಾಂಧಿನಗರ ಉಪ ನೋಂದಣಾಧಿಕಾರಿ ಕಚೇರಿಗೆ ಸೇರಿದ್ದು, ಪತ್ರದಲ್ಲಿನ ಸೀಲ್ ಮತ್ತು ಸಹಿಗಳು ಶಿವಾಜಿನಗರ ಉಪನೋಂದಣಾಧಿಕಾರಿಗಳ ಕಚೇರಿಗೆ ಸೇರಿದ್ದಾಗಿದೆ.
ಈ ಬಗ್ಗೆ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದಾಗ 2017ರ ಆಗಸ್ಟ್ 9ರಂದು 40,7837 ರಿಂದ 40,9826ಕ್ಕೆ ಮುಕ್ತಾಯ ಆಗಿರುವುದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸರ್ಕಾರ ಕೊಟ್ಟಿದ್ದ ಫ್ರಾಂಕಿಂಗ್ ಯಂತ್ರ (ನಂಬರ್ 6924) ಅನ್ನು ನಕಲಿ ಮಾಡಿ ಮಾಡಿಕೊಂಡು ಫ್ರಾಂಕಿಂಗ್ ಮಾಡಿ ಸರ್ಕಾರಕ್ಕೆ ಲಕ್ಷಾಂತರ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಹಲವು ಜನರಿಗೆ ನಕಲಿ ಮಿಷನ್‌ನಲ್ಲಿ ಫ್ರಾಂಕಿಂಗ್ ಮಾಡಿ ಸರ್ಕಾರಕ್ಕೆ ಬರಬೇಕಾಗಿದ್ದ ಆದಾಯ ಕಬಳಿಸಿರುವ ಆರೋಪಿಗಳನ್ನು ಪತ್ತೆ ಮಾಡಬೇಕೆಂದು ದೂರಿನಲ್ಲಿ ಸಬ್ ರಿಜಿಸ್ಟ್ರಾರ್ ಎಚ್.ಪಿ. ಶಶಿಕಲಾ, ಮನವಿ ಮಾಡಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.