ಲೋಕಾಯುಕ್ತಕ್ಕೆ ಬರುತ್ತಿವೆ ನಕಲಿ ದೂರು

Deputy Lokayukta, Justice K.N.Phanindra
ಉಪ ಲೋಕಾಯುಕ್ತ, ನ್ಯಾ. ಕೆ.ಎನ್.ಫಣೀಂದ್ರ
Published on

ಶಿವಮೊಗ್ಗ: ಲೋಕಾಯುಕ್ತಕ್ಕೆ ನಕಲಿ ದೂರುಗಳು ಬರುತ್ತವೆ. ಹಾಗಾಗಿ ಈಗ ದೂರು ಜತೆಗೆ ಅಫಿಡವಿಟ್ ಹಾಕಬೇಕು. ಈಗ ಆಧಾರ್ ಕಾರ್ಡ್ ಕೊಡಬೇಕು ಎಂದು ಉಪ ಲೋಕಾಯುಕ್ತ, ನ್ಯಾ. ಕೆ.ಎನ್.ಫಣೀಂದ್ರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತವು ಕೆಲವು ವಿಷಯಗಳಲ್ಲಿ ನೇರವಾಗಿ ಹಾಗೂ ಇನ್ನೂ ಕೆಲವು ಪ್ರಕಾರಣಗಳಲ್ಲಿ ವ್ಯಕ್ತಿ ಹಾಗೂ ಸಂಘಟನೆಗಳು ದಾಖಲಿಸುವ ಪ್ರಕರಣಗಳನ್ನು ಕೈಗೆತ್ತಿಕೊಂಡು ಪರಿಶೀಲನೆ ನಡೆಸಿ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ. ಖಾಸಗಿ ವ್ಯಕ್ತಿಗಳು ನಮೂನೆ 1 ಮತ್ತು 2ನ್ನು ಬಳಸಿ, ಅಫಿಡೇವಿಟ್ ಸಲ್ಲಿಸಿ ದೂರು ದಾಖಲಿಸಲು ಅವಕಾಶ ನೀಡಲಾಗಿದೆ ಎಂದರು.

ಇತ್ತೀಚಿಗೆ ದುರುದಾರರ ಆಧಾರ್ ಕಾರ್ಡ್ ಪಡೆದುಕೊಳ್ಳಲಾಗುತ್ತಿದೆ. ದಾಖಲಿಸುವ ದೂರು ಸುಳ್ಳು ಆಗಿದ್ದಲ್ಲಿ ಲೋಕಾಯುಕ್ತ ಕಾಯ್ದೆ ಸೆಕ್ಷನ್ 17, 19ರಡಿ ದಂಡನೆಗೆ ಗುರಿಪಡಿಸಲಾಗುತ್ತದೆ. ಸಾರ್ವಜನಿಕ ಪರವಾದ ವಿಷಯಗಳಿದ್ದು ಪತ್ರಿಕೆಗಳಲ್ಲಿ ಸಾಕ್ಷ್ಯಗಳೊಂದಿಗೆ ಪ್ರಕಟಕೊಂಡಿದ್ದಲ್ಲಿ ಲೋಕಾ ಸ್ವಯಂಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳುತ್ತದೆ ಎಂದರು.

ಅಧಿಕಾರಿಗಳು ಬೇರೆ ಬೇರೆ ರೀತಿಯಲ್ಲಿ ಲಂಚ ಪಡೆಯುತ್ತಿದ್ದಾರೆ. ಗೂಗಲ್ ಪೇ ಸೇರಿದಂತೆ ಇನ್ನಿತರೆ ಮಾರ್ಗದಲ್ಲಿ ಹಣ ಪಡೆಯುತ್ತಿದ್ದಾರೆ. ಯಾವುದೋ ಮೂರನೇ ವ್ಯಕ್ತಿ ಬಳಿ ಹಣ ನೀಡುವಂತೆ ಸಾರ್ವಜನಿಕರಿಗೆ ಹೇಳುತ್ತಿದ್ದಾರೆ. ಇದನ್ನು ಪತ್ತೆ ಮಾಡಿ ಶಿಕ್ಷೆ ಕೊಡಿಸುವ ಸವಾಲು ನಮ್ಮ ಮುಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net