online cheating : ಕ್ಯಾನ್ಸರ್‌ ಚಿಕಿತ್ಸೆಗಾಗಿ ಹಣ ಸಂಗ್ರಹ ಮಾಡಿ ಬಂದ ದುಡ್ಡಲ್ಲಿ ಫ್ಲಾಟ್ ಖರೀದಿಸಿದ

flat
ಸಾಂದರ್ಭಿಕ ಚಿತ್ರ
Published on

ಚೀನಾ: (online cheating) ಕಷ್ಟ ಎಂದು ಹೇಳಿದರೆ ಕೆಲವು ಜನರು ಪರಸ್ಪರ ಸಹಾಯ ಮಾಡಲು ಮುಂದೆ ಬರುತ್ತಾರೆ. ಅನೇಕ ಬಾರಿ ಜನರು ಈ ಸಹಾಯವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸುತ್ತಾರೆ. ಇತರರನ್ನು ದಾರಿ ತಪ್ಪಿಸುತ್ತಾರೆ. ನಮ್ಮ ನೆರೆಯ ದೇಶದಿಂದ ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಸಂಗತಿ ಬೆಳಕಿಗೆ ಬಂದಿದೆ.

ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ಜೀವ ಕಾಪಾಡಿ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಕೆಲವೊಮ್ಮೆ ಜಾಹೀರಾತು ನೀಡಿರುವುದನ್ನು ನೀವು ನೋಡಿರುತ್ತೀರು ಸಹಾಯವನ್ನು ಮಾಡಿರುತ್ತೀರಿ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಯುವಕನೊಬ್ಬ ಸಾಕಷ್ಟು ಹಣವನ್ನು ಸಂಪಾದನೆ ಮಾಡಿದ್ದಾನೆ. ವ್ಯಕ್ತಿಯೊಬ್ಬ ಕ್ಯಾನ್ಸರ್ ಹೆಸರಿನಲ್ಲಿ ಜನರಿಂದ ದೇಣಿಗೆ ಕೇಳಿ ಹಣ ಸಂಗ್ರಹಿಸಿ ತನಗಾಗಿ ಮನೆ ಖರೀದಿಸಿದ್ದಾನೆ.

ಚೀನಾದಲ್ಲಿ ವಾಸಿಸುವ 29 ವರ್ಷದ ಲ್ಯಾನ್ ಎಂಬ ವ್ಯಕ್ತಿ, ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಮತ್ತು ಸಹಾಯದ ಅಗತ್ಯವಿದೆ ಎಂದು ಜನರಿಗೆ ಮನವಿ ಮಾಡಿದ್ದಾನೆ. ಕೆಲವರು ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ.

ವ್ಯಕ್ತಿ ಸಿಕ್ಕಿಬಿದ್ದಿದ್ದು ಹೇಗೆ?

ಕೆಲವು ತಿಂಗಳ ನಂತರ  ತಮ್ಮ ಮನೆಯ ಫೋಟೋವನ್ನು ಪೋಸ್ಟ್ ಮಾಡಿದರು ಮತ್ತು ಕೆಲವೇ ದಿನಗಳ ಹಿಂದೆ ಈ ಮನೆಯನ್ನು ಖರೀದಿಸಿರುವುದಾಗಿ ಹೇಳಿದರು. ನಂತರ ಜನರಿಗೆ ಅನುಮಾನ ಬರಲಾರಂಭಿಸಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ನಿಧಿ ಸಂಗ್ರಹ ವೇದಿಕೆಯಿಂದ 81 ಲಕ್ಷ ಹಣ ಪಡೆದಿರುವುದು ತಿಳಿದು ಬಂದಿದೆ.

ಕೊನೆಯಲ್ಲಿ, ಹೊಸ ಫ್ಲಾಟ್ ಖರೀದಿಸಲು ಬಳಸಿದ ಹಣವು ತನ್ನದೇ ಎಂದು ಸಾಬೀತುಪಡಿಸಲು ಲ್ಯಾನ್‌ಗೆ ಸಾಧ್ಯವಾಗಲಿಲ್ಲ. ಅದರ ನಂತರ ಜನರು ಅವರ ನಿಧಿ ಸಂಗ್ರಹಿಸುವ ವೇದಿಕೆಯನ್ನು ಬಳಸಲು ಪ್ರಾರಂಭಿಸಿದ. ಈತನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net