ಬಸವ ತತ್ವ ಮೈಗೂಡಿಸಿಕೊಳ್ಳುವಲ್ಲಿ ವಿಫಲ

ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು .
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು .
Published on

ರಾವಂದೂರು: ಬಸವಣ್ಣನವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಕುಂದೂರು ವಿರಕ್ತ ಮಠದ ಡಾ. ಶರತ್ ಚಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಬಸವ ಬಳಗ ಹಾಗೂ ಬಸವ ಕೇಂದ್ರದ ಸಹಯೋಗದಲ್ಲಿ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

150 ವರ್ಷಗಳ ಹಿಂದೆ ಬಸವಣ್ಣನವರ ಬಗ್ಗೆ ಇಲ್ಲಿನ ಜನರಿಗೆ ಹೆಚ್ಚಾಗಿ ತಿಳಿದಿರಲಿಲ್ಲ. ಈ ಸಂದರ್ಭದಲ್ಲಿ ಕವಿಗಳಾದ ಫ.ಘು.ಹಳಕಟ್ಟಿ ಹಾಗೂ ಹರಡೇಕರ್ ಮಂಜಪ್ಪ ಅವರು ನಮಗೆ ಬಸವಣ್ಣನವರ ತದ್ಭವ ಆದರ್ಶಗಳನ್ನು ತಮ್ಮ ಮಾತು ಹಾಗೂ ಬರವಣಿಗೆಯ ಮೂಲಕ ಸಮಾಜಕ್ಕೆ ತಿಳಿಸಿಕೊಟ್ಟರು. ಅಂದಿನಿಂದ ಈಗಿನ ಪೀಳಿಗೆಯವರಿಗೆ ಬಸವಣ್ಣನ ತತ್ವ ಹಾಗೂ ಆದರ್ಶಗಳು ವರ್ಗಾವಣೆ ಆಗುತ್ತಾ ಬಂದಿದೆ ಎಂದರು.

ಬಸವಣ್ಣನವರ ತತ್ವ ಹಾಗೂ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡಾಗ ಮಾತ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಬಸವಣ್ಣನವರು ಕೇವಲ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಎಲ್ಲರೂ ಸಹ ಪ್ರೀತಿಸಿ ಗೌರವಿಸುವಂತಹ ಮಹಾನ್ ವ್ಯಕ್ತಿ ಎಂದರು.

ಬಸವ ಜಯಂತಿಯನ್ನು ನಾವು ಮಾತ್ರ ಆಚರಿಸಿದರೆ ಸಾಲದು ಇಡೀ ವಿಶ್ವವೇ ಆಚರಿಸಬೇಕು . ಯಾವುದೇ ಪ್ರಚಾರವಿಲ್ಲದೆ
ಎಲ್ಲಾ ಜನರು ಪ್ರೀತಿಸುವಂತಹ ಯಾವುದಾದರೂ ಒಂದು ಧರ್ಮವಿದೆ ಅಂದರೆ ಬಸವಧರ್ಮ ಮಾತ್ರ ಎಂದು ತಿಳಿಸಿದರು.

ನಿವೃತ್ತ ಉಪನ್ಯಾಸಕ ಮೊರಬದ ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಯಭಾರಿಯಾಗಿ ಬಸವಣ್ಣನವರ ಹೆಸರು ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸದಿರುವುದು ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರ ತತ್ವ ಹಾಗೂ ಆದರ್ಶಗಳನ್ನು ಮಾತಿನಲ್ಲಿ ಹೇಳಿದರೆ ಸಾಲದು ಅವುಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಅವುಗಳನ್ನು ಆಚರಿಸಿದಾಗ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು.

ಮಾಜಿ ಶಾಸಕ ಎಚ್.ಸಿ.ಬಸವರಾಜ ಮಾತನಾಡಿ, ನಮ್ಮ ಸಮಾಜದ ಒಳಪಂಗಡಗಳು ಒಂದಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರ್.ಎಸ್. ಚಿಕ್ಕ ವೀರಪ್ಪ , ಆರ್.ಎಸ್. ಶಶಿಧರ್ , ಆರ್.ಎಂ.ದಿನೇಶ್ ಆರ್.ಆರ್. ಮೋಹನ್ , ಆರ್.ಆರ್.ಗಣೇಶ್ , ಆರ್.ಎಸ್. ಸುರೇಶ್ , ಆರ್.ಬಿ. ಸುರೇಶ್ , ಸಕಲಾರಾಧ್ಯ ಅವರನ್ನು ಸನ್ಮಾನಿಸಲಾಯಿತು. ಬಸವ ಜಯಂತಿ ಪ್ರಯುಕ್ತ ಸರಗೂರು ಬಿಡಗಲಿ ಮಠದ ಮಹಾದೇವಸ್ವಾಮಿ ಷಟ್ ಸ್ಥಲ ಧ್ವಾಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ನಿಮಿತ್ತ ಚಿತ್ರದುರ್ಗದ ಜಮುರಾ ಕಲಾವಿದರಿಂದ ವಚನ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು .

ಕಾರ್ಯಕ್ರಮದಲ್ಲಿ ಮುರುಘಾ ಮಠದ ಮೋಕ್ಷ ಮೋಕ್ಷಪತಿ ಸ್ವಾಮೀಜಿ , ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಚಂದ್ರಶೇಖರಯ್ಯ ಮಾತನಾಡಿದರು . ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ಪ್ರಶಾಂತ್ ಬಸವರಾಜ್ ಚೆನ್ನಾಳ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಯೋಗಿ , ಆರ್.ಡಿ. ಶಿವಮೂರ್ತಿ , ಆರ್.ಎಸ್.ಮಹೇಶ್, ಆರ್.ಟಿ.ಸತೀಶ್, ಆರ್.ಎಸ್. ವಿಜಯ್ ಕುಮಾರ್ , ನಾಗಪ್ಪ ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷ ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net