

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪತ್ನಿ ಎಮಿಲಿ ಶೆಂಕ್ಲ್ ಎಂದು ಹೇಳಿಕೊಂಡಿರುವ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸೀರೆ ಧರಿಸಿದ ವಿದೇಶಿ ಮಹಿಳೆಯ ಕಪ್ಪು ಬಿಳುಪು ಫೋಟೋವನ್ನು ಅಪ್ಲೋಡ್ ಮಾಡಿ ಇವರೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪತ್ನಿ ಎಂದು ಬರೆದು ಶೇರ್ ಮಾಡಲಾಗಿತ್ತು.
ವಿಜೇತ ಮಲ್ಲಿಕ್ ಬಿಜೆಪಿ ಹೆಸರಿನ ಫೇಸ್ಬುಕ್ ಪುಟದಲ್ಲಿ ಮಹಿಳೆಯ ಫೋಟೋ ಹಂಚಿಕೆ ಮಾಡಲಾಗಿತ್ತು. ಈ ಪೋಟೋವನ್ನು 800 ಮಂದಿ ನಂತರ ಮರು ಹಂಚಿಕೆ ಮಾಡಿದ್ದರು.
ವೈರಲ್ ಆದ ಫೋಟೋ ನೇತಾಜಿಯ ಪತ್ನಿ ಎಮಿಲಿ ಅಲ್ಲ ಎಂದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಪತ್ತೆ ಮಾಡಿದೆ. ಈ ಫೋಟೋ ಫ್ರಾನ್ಸ್‌ನಲ್ಲಿ ಜನಿಸಿದ ಮ್ಯಾಕ್ಸಿಮೈನ್ ಪೋರ್ಟಾಜ್ ಅವರದ್ದು, ನಂತರ ಇವರು ಹಿಂದು ಧರ್ಮಕ್ಕೆ ಮತಾಂತರಗೊಂಡು ಸಾವಿತ್ರಿ ದೇವಿ ಎಂದು ಹೆಸರು ಬದಲಾಯಿಸಿಕೊಂಡರು ಎಂದು ಕಂಡು ಹಿಸಿದೆ.
ಸಾವಿತ್ರಿ ದೇವಿ ಯಾರು?: ಸಾವಿತ್ರಿ ದೇವಿ ಅವರು 1905ರಲ್ಲಿ ಫ್ರಾನ್ಸ್‌ನಲ್ಲಿ ಜನಿಸಿದರು. ಮೊದಲು ಅವರ ಹೆಸರು ಮ್ಯಾಕ್ಸಿಮೈನ್ ಪೋರ್ಟಾಜ್. ಹಿಂದು ಧರ್ಮದ ಬಗ್ಗೆ ಆಕರ್ಷಣೆ ಹೊಂದಿ ಅವರು 1935ರಲ್ಲಿ ಭಾರತಕ್ಕೆ ಬಂದು ಕೋಲ್ಕತದಲ್ಲಿ ಹಿಂದು ಧರ್ಮದ ಬಗ್ಗೆ ಅಧ್ಯಯನ ನಡೆಸುತ್ತಿದ್ದರು. ಈ ವೇಳೆ ಪುಸ್ತಕ ಪ್ರಕಾಶನ ಮಾಡುತ್ತಿದ್ದ ಕೃಷ್ಣ ಮುಖರ್ಜಿ ಎಂಬುವವರನ್ನು ಮದುವೆಯಾದರು. ನಂತರ ತಮ್ಮ ಹೆಸರನ್ನು ಅವರು ಸಾವಿತ್ರಿ ದೇವಿ ಎಂದು ಬದಲಿಸಿಕೊಂಡರು. ಹೀಗಾಗಿ ಸಾವಿತ್ರಿದೇವಿ ಅವರಿಗೂ ನೇತಾಜಿ ಪತ್ನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪತ್ನಿ ಎಮಿಲಿ ಶೆಂಕ್ಲ್ ಪೋಟೋಗೂ ಸಂಬಂಧ ಇಲ್ಲ.
ನೇತಾಜಿ ಅವರ ಹಿರಿಯ ಸಹೋದರ ಶರತ್ ಚಂದ್ರ ಬೋಸ್ ಅವರ ಮೊಮ್ಮಗ ಹಾಗೂ ಕೋಲ್ಕತ್ತಾದ ಬಿಜೆಪಿ ಮುಖಂಡ ಚಂದ್ರ ಬೋಸ್ ಅವರನ್ನು ಎಎಫ್‌ಡಬ್ಲ್ಯೂಎ ಸಂಪರ್ಕಿಸಿದಾಗ ಪೋಟೋದಲ್ಲಿರುವವರು ಎಮಿಲಿ ಅಲ್ಲ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಸಾವಿತ್ರಿ ದೇವಿ ಹಾಗೂ ನೇತಾಜಿ ಭೇಟಿಯಾಗಿರುವುದಕ್ಕೆ ದಾಖಲೆಗಳು ಕೂಡ ಇಲ್ಲ ಎಂದು ತಿಳಿಸಿದ್ದಾರೆ.
ಎಮಿಲಿ ಶೆಂಕ್ಲ್ ಅವರು ನೇತಾಜಿ ಬರ್ಮಾದ ಜೈಲಿನಲ್ಲಿ ಇದ್ದ ವೇಳೆ ಪರಿಚಯವಾದರು. ಎಮಿಲಿ ಟೈಪ್ರೈಟರ್ ಆಗಿದ್ದರು. ಜೈಲಿನಲ್ಲಿ ಇದ್ದ ವೇಳೆ ನೇತಾಜಿ ದಿ ಇಂಡಿಯನ್ ಸ್ಟ್ರಗಲ್ ಎಂಬ ಪುಸ್ತಕ ಬರೆಯಲು ಆರಂಭಿಸಿದರು. ನೇತಾಜಿ ಹೇಳಿದ್ದನ್ನು ಟೈಪ್ ಮಾಡಲು ಎಮಿಲಿ ಸಹಾಯ ಮಾಡಿದರು. ಪರಿಚಯವಾಗಿ ಇಬ್ಬರು ವಿವಾಹವಾದರು. ಇವರಿಗೆ ಅನಿತಾ ಎಂಬ ಮಗಳು ಜನಿಸಿದಳು. (ಏಜೆನ್ಸೀಸ್)