FACT CHECK| ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಕನಿಗೆ ಲಾಟಿಯಲ್ಲಿ ಥಳಿಸುತ್ತಿರುವುದು ನಿಜವೇ?

fact check 1 mar 2020
Published on

ನವದೆಹಲಿ: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿ ಬಾಲಕನೊಬ್ಬನಿಗೆ ಲಾಠಿಯಲ್ಲಿ ಥಳಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಫೇಸ್​ಬುಕ್​ ಬಳಕೆದಾರ ಅನಿಲ್​ ಕುಮಾರ್​ ಎಂಬಾತ ಪೋಟೋ ಅಪ್​ಲೋಡ್​ ಮಾಡಿದ್ದಾರೆ. ಈ ಫೋಟೋವನ್ನು 27 ಸಾವಿರ ಮಂದಿ ಹಂಚಿಕೆ ಮಾಡಿದ್ದಾರೆ. ಭದ್ರತಾ ಸಿಬ್ಬಂದಿ ಉಗ್ರರನ್ನು ಯಾವ ರೀತಿ ನಿಭಾಯಿಸುತ್ತಿದ್ದಾರೆ ನೋಡಿ ಎಂದು ಶೀರ್ಷಿಕೆ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಗಲಭೆಕೋರರನ್ನು ಸದೆ ಬಡಿಯುವುದನ್ನು ಬಿಟ್ಟು ಬಾಲಕನನ್ನು ಥಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಫೋಟೋ ನಕಲಿ ಎಂದು ಪತ್ತೆ ಮಾಡಿದೆ. ವೈರಲ್​ ಆಗಿರುವ ಚಿತ್ರ ಬಾಂಗ್ಲಾ ದೇಶದ್ದು. 2007ರಲ್ಲಿ ಬಾಂಗ್ಲಾ ದೇಶದಲ್ಲಿ ಗಾರ್ಮೆಂಟ್​ ಕಾರ್ಖಾನೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ನಡೆಸಿದ ಲಾಠಿ ಪ್ರಹಾರದ ಚಿತ್ರ. ಆ ವೇಳೆ ಪೊಲೀಸರು ಬಾಲಕನನ್ನು ಥಳಿಸುತ್ತಿದ್ದಾರೆ. ಈ ಚಿತ್ರವನ್ನು 2010 ರಲ್ಲಿ ದಿ ಗಾರ್ಡಿಯನ್​ ಪತ್ರಿಕೆ ಲೇಖನದಲ್ಲಿ ಬಳಸಿಕೊಂಡಿದೆ.

ಹೀಗಾಗಿ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೂ ಹಾಗೂ ವೈರಲ್​ ಆದ ಫೋಟೋಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಪತ್ತೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net