

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ರೂಪಿಸಿದ ಕೃತಕ ಬುದ್ಧಿಮತ್ತೆ (ಎಐ) ಉದ್ಯಮದಲ್ಲಿ ಶೇ. 30ರಷ್ಟು ಹೂಡಿಕೆ ಮಾಡಲು ಮೆಟಾ ಪ್ಲಾಟ್ಫಾಮ್ಸ್ ಫೇಫೇಸ್ಬುಕ್ ಓವರ್ಸೀಸ್ ಮುಂದಾಗಿದೆ. ‘ರಿಲಯನ್ಸ್ ಎಂಟರ್ಪ್ರೖೆಸ್ ಇಂಟೆಲಿಜೆನ್ಸ್ ಲಿಮಿಟೆಡ್’ ಹೆಸರಿನ ಈ ಉದ್ಯಮದಲ್ಲಿ ರಿಲಯನ್ಸ್ ಶೇ. 70ರಷ್ಟು ಪಾಲು ಹೊಂದಿರುತ್ತದೆ ಎಂದು ಕಂಪನಿ ಷೇರುಪೇಟೆಗೆ ಸಲ್ಲಿಸಿರುವ ದಾಖಲೆಯಲ್ಲಿ ತಿಳಿಸಿದೆ. ಎರಡೂ ಕಂಪನಿಗಳು ಸೇರಿ ಆರಂಭಿಕ ಹಂತದಲ್ಲಿ 855 ಕೋಟಿ ರೂ. ಹೂಡಿಕೆ ಮಾಡಲಿವೆ.