

ಹೈದರಾಬಾದ್: ಕ್ಯಾನ್ಸರ್(Cancer) ವಿರುದ್ಧ ಹೋರಾಡಲು ಧೈರ್ಯವೇ ದೊಡ್ಡ ಅಸ್ತ್ರವಾಗಿದ್ದು, ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
ಹೈದರಾಬಾದ್ನ ಬಂಜಾರ ಹಿಲ್ಸ್‌ನ ರೈನ್‌ಬೋ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಜತೆ ಕೆಲ ಕಾಲ ಕಳೆದ ಅವರು, ಕ್ಯಾನ್ಸರ್ ಕುರಿತು ಭಯಪಡುವ ಅಗತ್ಯವಿಲ್ಲ. ಕ್ರಿಕೆಟ್ ಪಂದ್ಯದಲ್ಲಿ ಕ್ಯಾಚ್ ಕೈಬಿಡುವುದರಿಂದ ಕೆಲವೊಮ್ಮೆ ಆಟಕ್ಕೆ ಹಾನಿಯಾಗಬಹುದು, ಜೀವನದಲ್ಲಿ ಆತ್ಮವಿಶ್ವಾಸ ಮತ್ತು ಭಾವನಾತ್ಮಕ ಸಮತೋಲನ ತಪ್ಪಿ ಕ್ಯಾನ್ಸರ್ ನಂತಹ ಸವಾಲುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ವೈದ್ಯರಾದ ಡಾ.ದಿನೇಶ್ ಕುಮಾರ್, ಡಾ.ಫೈಸಲ್ ಬಿ ನಹದಿ, ಡಾ.ಶಿರಿಶರಾಣಿ, ಡಾ.ಲೋಕೇಶ್ ಲಿಂಗಪ್ಪ, ಡಾ.ಪ್ರಶಾಂತ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.