

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ನರ್ಸ್ಗೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ವ್ಯಕ್ತಿ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾನೆ. ವರ್ತೂರಿನ ರಾಮಗೋಡನಹಳ್ಳಿ ನಿವಾಸಿ 34 ವರ್ಷದ ಸಂತ್ರಸ್ತೆ. ಆರೋಪಿ ಬೀದರ್ ಮೂಲದ ದತ್ತಾತ್ರಿ ದವಲೇಗರ್ ಎಂಬಾತನ ವಿರುದ್ಧ ವರ್ತರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ ವ್ಯಕ್ತಿ ಬೀದರ್ನ ವ್ಯಕ್ತಿ - ಬೆಂಗಳೂರಿನ ಮಹಿಳೆ
ಸಂತ್ರಸ್ತೆ 12 ವರ್ಷದ ಹಿಂದೆ ಮದುವೆಯಾಗಿದ್ದು ರಾಮಗೋಡನಹಳ್ಳಿಯಲ್ಲಿ ವಾಸಿಸುತ್ತಿದ್ದಾಳೆ. ದಂಪತಿಗೆ 10 ವರ್ಷದ ಪುತ್ರನಿದ್ದಾನೆ. ವೈದ್ಯಕೀಯ ಕಂಪನಿಯೊಂದರಲ್ಲಿ ನರ್ಸ್ ಆಗಿರುವ ಆಕೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯನ್ನು ತೊರೆದು ಪ್ರತ್ಯೇಕವಾಗಿದ್ದಳು. 2018ರಲ್ಲಿ ಫೇಸ್ಬುಕ್ ಮೂಲಕ ಸ್ನೇಹ ಬೆಳೆಸಿದ್ದ ದತ್ತಾತ್ರಿ, ಪ್ರತಿನಿತ್ಯ ಚಾಟಿಂಗ್ ಮಾಡುತ್ತಿದ್ದ. ಇಬ್ಬರ ನಡುವೆ ಸಲುಗೆ ಬೆಳೆದಿದ್ದು, ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು.
ಮದುವೆಯಾಗುವುದಾಗಿ ನಂಬಿಸಿದ್ದ ದತ್ತಾತ್ರಿ ಆಗಾಗ ಬೆಂಗಳೂರಿಗೆ ಬಂದು ಆಕೆಯನ್ನು ಭೇಟಿ ಮಾಡಿ ಹೋಗುತ್ತಿದ್ದ. ಮೊಬೈಲ್ ಹಾಳಾಗಿದ್ದು ಕೊಡಿಸುವಂತೆ ಕೇಳಿದ್ದ. ಆಕೆ ಆನ್ಲೈನ್ನಲ್ಲಿ ಮೊಬೈಲ್ ಖರೀದಿಸಿ ಕೊಟ್ಟಿದ್ದಳು. ಮಾರ್ಚ್ನಲ್ಲಿ ನಗರಕ್ಕೆ ಬಂದಾಗ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ಬೀದರ್ಗೆ ವಾಪಸ್ ಆಗಿದ್ದು, ಇದುವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ತಾನು ವಂಚನೆಗೆ ಒಳಗಾಗಿರುವುದು ಅರಿವಾಗಿ ಸಂತ್ರಸ್ತೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.