

ತಿ.ನರಸೀಪುರ: ತಾಲೂಕಿನ ವ್ಯಾಸರಾಜಪುರ(ಕೆಬ್ಬೆ) ಗ್ರಾಮದಲ್ಲಿರುವ ಚೈತನ್ಯ ಚಾರಿಟಬಲ್ ಟ್ರಸ್ಟ್ ನಲ್ಲಿ ಅ.18 ರಂದು ಬೆಳಗ್ಗೆ 11 ರಿಂದ ಕಣ್ಣಿನ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಲಯನ್ ಕ್ಲಬ್ ಆಫ್ ಈರೋಡ್ ಈಸ್ಟ್ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಶಿಬಿರದಲ್ಲಿ ಕಣ್ಣಿನ ಪೊರೆ, ಸಮೀಪ ಮತ್ತು ದೂರದೃಷ್ಟಿ ದೋಷ, ಕಣ್ಣಿನಲ್ಲಿ ಬಿರುಕು ಉಂಟಾಗುವುದು, ಗ್ಲಾಕೋಮ, ನೀರು ಸೋರುವಿಕೆ, ವಾರೆ ಕಣ್ಣು, ಕಣ್ಣಿನಲ್ಲಿ ಗೀಜು ಬರುವುದು, ರಾತ್ರಿ ಕುರುಡುತನ ಹಾಗೂ ಇನ್ನಿತರ ಸಮಸ್ಯೆಗಳನ್ನು ಪರೀಕ್ಷಿಸಲಾಗುವುದು. ಕಣ್ಣಿನಲ್ಲಿ ಪೊರೆಯಿದೆ ಎಂದು ತೀರ್ಮಾನಿಸಲ್ಪಟ್ಟವರನ್ನು ಅದೇ ದಿನ ಮಧ್ಯಾಹ್ನ ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗುವುದು. ಶಸ್ತ್ರ ಚಿಕಿತ್ಸೆಗಾಗಿ ಬರುವವರು ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ತರುವುದು. ಸಾರ್ವಜನಿಕರು ಈ ಸದಾವಕಾಶವನ್ನು ಬಳಸಿಕೊಳ್ಳಬೇಕೆಂದು ಶಿಬಿರದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.