5 ವರ್ಷದ ಧೈರ್ಯಶಾಲಿ ಬಾಲಕನ ಈ ಕೆಲಸ ಎಲ್ಲರನ್ನೂ ಹುಬ್ಬೇರುವಂತೆ ಮಾಡುವುದು ಖಂಡಿತ..!

NOHA
Published on

ಅದು ಧೈರ್ಯಶಾಲಿ 5 ವರ್ಷದ ಬಾಲಕನಿಗೆ ಸನ್ಮಾನ ಕಾರ್ಯಕ್ರಮ. ಆ ಬಾಲಕ ಮಾಡಿದ್ದು 5 ಕುಟುಂಬಗಳನ್ನೇ ಕಾಪಾಡಿದ ಕೆಲಸ!

ಅಮೆರಿಕದಲ್ಲಿ ವಾಸಿಸುವ 5 ವರ್ಷದ ಬಾಲಕ ನೋಹಾ ವುಡ್ಸ್​ ಬೆಳಗಿನ ಜಾವ ಎಚ್ಚರಗೊಂಡಾಗ ರೂಂನಲ್ಲಿ ಬೆಂಕಿ ಆವರಿಸಿತ್ತು. ತಡ ಮಾಡದೇ ತನ್ನ ತಂಗಿಯನ್ನು ಎತ್ತಿಕೊಂಡು, ನಾಯಿಯನ್ನು ಕರೆದುಕೊಂಡು ಕಿಟಕಿ ಮೂಲಕ ಹೊರ ಬಂದಿದ್ದಾನೆ.

ಅಷ್ಟೇ ಅಲ್ಲ, ಬೆಂಕಿ ಹತ್ತಿದ್ದು ಬಾಗಿಲ ಬಳಿಯೇ. ಆದರೂ ಹೆದರದ ಬಾಲಕನಿಗೆ ಇದ್ದ ಒಂದೇ ದಾರಿ ಎಂದರೆ ಕಿಟಕಿ. ಅದನ್ನೇ ಬಳಸಿ ತನ್ನ ತಂಗಿ ಮತ್ತು ನಾಯಿಯನ್ನ ಹೊರಗೆ ಕರೆ ತಂದಿದ್ದಾನೆ.

ಅಲ್ಲದೆ ತಕ್ಷಣವೇ ಪಕ್ಕದ ಮನೆಯಲ್ಲಿದ್ದ ತನ್ನ ಚಿಕ್ಕಪ್ಪನನ್ನು ಎಚ್ಚರಿಸಿದ್ದಾನೆ. ಬೆಂಕಿ ಅಲ್ಲಿಗೂ ಆವರಿಸುವ ಮುನ್ನವೇ ಎಚ್ಚೆತ್ತುಕೊಂಡ ಅವರು, ಅದೇ ಕಟ್ಟಡದಲ್ಲಿದ್ದ ಉಳಿದ ನಾಲ್ಕು ಕುಟುಂಬಗಳನ್ನು ಎಬ್ಬಿಸಿದ್ದಾರೆ. ಆ ಬಿಲ್ಡಿಂಗ್​ನಲ್ಲಿದ್ದ ಎಲ್ಲರೂ ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಸಣ್ಣ ಪುಟ್ಟ ಗಾಯಗಳಾದವರಿಗೆ ಚಿಕಿತ್ಸೆ ನೀಡಲಾಗಿದೆ.

ನಾವು ಈ ಬಾಲಕನನ್ನು ಸನ್ಮಾನಿಸಿದ್ದೇವೆ. 5 ವರ್ಷದ ಬಾಲಕ ಅಷ್ಟು ಕುಟುಂಬಗಳನ್ನು ರಕ್ಷಿಸಿದ್ದಾನೆ. ಅದು ಮೆಚ್ಚಲೇ ಬೇಕಾದ ಕಾರ್ಯ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net