ಸಿಇಟಿಯಲ್ಲಿ ಪಠ್ಯೇತರ ಪ್ರಶ್ನೆ, ಸಮಿತಿ ರಚನೆಯಲ್ಲಿ ಹಸ್ತಕ್ಷೇಪವಿಲ್ಲ ಹೈಕೋರ್ಟ್

highcourt
Published on

ಬೆಂಗಳೂರು : ಕಳೆದ ಏಪ್ರಿಲ್‌ನಲ್ಲಿ ನಡೆದ ಕರ್ನಾಟಕದ ಸಿಇಟಿ ಪರೀಕ್ಷೆಗಳಲ್ಲಿ ಕೇಳಲಾದ ಪಠ್ಯೇತರ ಪ್ರಶ್ನೆಗಳನ್ನು ಪರಿಶೀಲಿಸಲು ಸಮಿತಿ ರಚಿಸುವ ರಾಜ್ಯ ಸರ್ಕಾರದ ನಿರ್ಧಾರದ ಸಿಂಧುತ್ವವನ್ನು ಪರಿಶೀಲಿಸಲು ನಿರಾಕರಿಸಿರುವ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಪ್ರಕರಣ ಸಂಬಂಧ ಬೆಂಗಳೂರಿನ ದಾಸರಹಳ್ಳಿ ನಿವಾಸಿ ತನ್ಮಯ ಎಂಬುವವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿಯಲ್ಲಿ ಏನಿದೆ?:

ಅರ್ಜಿದಾರರು ತಾನು ದ್ವಿತೀಯ ಪಿಯುಸಿ ಸಿಬಿಎಸ್ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ್ದು, ಈ ಬಾರಿ ನಡೆದ ಸಿಇಟಿ ಪರೀಕ್ಷೆಯಿಂದಾಗಿ ವಿದ್ಯಾರ್ಥಿಯಾದ ನನಗೆ ಅನೇಕ ರೀತಿಯಲ್ಲಿ ಗೊಂದಲ ಉಂಟಾಗಿದೆ. ಪಠ್ಯೇತರ ಪ್ರಶ್ನೆಗಳನ್ನು ರ‌್ಯಾಂಕ್ ಪ್ರಕಟಣೆ ವೇಳೆ ಪರಿಗಣಿಸುವುದಿಲ್ಲ ಎಂದು ಈ ಮೊದಲೇ ತಿಳಿದಿದ್ದರೆ ಆ ಪ್ರಶ್ನೆಗಳಿಗೆ ನೀಡುವ ಸಮಯವನ್ನು ಇತರ ಪ್ರಶ್ನೆಗಳಿಗೆ ಉತ್ತರಿಸಲು ವಿನಿಯೋಗಿಸುತ್ತಿದ್ದೆ. ನಾಲ್ಕು ವಿಷಯಗಳಲ್ಲಿ ಹೊರಹಾಕಲ್ಪಟ್ಟ ಪ್ರಶ್ನೆಗಳು ಪ್ರಮುಖವಾಗಿದ್ದು ಸಾಕಷ್ಟು ಸಮಯವನ್ನು ನೀಡಿರುವುದಾಗಿ ಹೇಳಿದ್ದರು.

ಅಲ್ಲದೆ, ಸಿಎಟಿ ಪರೀಕ್ಷೆಯಲ್ಲಿ ಕೇಳಲಾದ 180 ಪ್ರಶ್ನೆಗಳನ್ನು ಒಳಗೊಂಡಂತೆ ಸಿದ್ಧಪಡಿಸಿದ ರ‌್ಯಾಂಕ್ ಪಟ್ಟಿಯನ್ನು ಆಧರಿಸಿ ಎಂಜಿನಿಯರಿಂಗ್ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲು ಕೆಇಎಗೆ ನಿರ್ದೇಶನ ನೀಡಬೇಕೆಂದು. ಪಿಯುಸಿ ಪತ್ರಿಕೆಗಳಿಗಿಂತ ಸಿಬಿಎಸ್ ಈ ಪತ್ರಿಕೆಗಳ ಕಷ್ಟದ ಮಟ್ಟವನ್ನು ಪರಿಗಣಿಸಿ ರ‌್ಯಾಂಕ್ ಪಟ್ಟಿಯನ್ನು ಲೆಕ್ಕಾಚಾರ ಮಾಡುವಾಗ ಅವರಿಗೆ ಹೆಚ್ಚಿನ ಅಂಕಗಳನ್ನು ಒದಗಿಸಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net