

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗಳ ನೋಂದಣಿಗಾಗಿ ಇ-ಆಸ್ತಿ ತಂತ್ರಾಂಶದಲ್ಲಿ ಪಡೆದ ಖಾತಾ ಕಡ್ಡಾಯ ನಿಯಮ ಅನುಷ್ಠಾನದ ದಿನಾಂಕವನ್ನು ವಿಸ್ತರಣೆ ಮಾಡಿ ಕಂದಾಯ ಇಲಾಖೆ ಆದೇಶಿಸಿದೆ.
ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಸುವರಿಗೆ ಕಡಿವಾಣ ಹಾಕುವ ಉದ್ದೇಶಕ್ಕೆ ಸ್ಥಿರಾಸ್ತಿ ನೋಂದಣಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಪಡೆದ ಖಾತಾ ಮಾಹಿತಿಯನ್ನು ಪಡೆದು ದಸ್ತಾವೇಜು ನೋಂದಣಿ ಮಾಡುವಂತೆ ಸೂಚಿಸಲಾಗಿದೆ. ಯಾವುದೇ ಭೌತಿಕ ಖಾತಾ ದಾಖಲೆ ಪತ್ರಗಳನ್ನು ಪಡೆಯದಂತೆ ಆದೇಶಿಸಲಾಗಿದೆ. ಈಗಾಗಲೇ ಇ-ಆಸ್ತಿ ತಂತ್ರಾಂಶದೊಂದಿಗೆ ಕಾವೇರಿ 2.0 ಸ್‌ಟಾವೇರ್‌ಗೆ ಸಂಯೋಜಿಸಲಾಗಿದೆ. ಆದರಿಂದ ಸ್ಥಿರಾಸ್ತಿ ನೋಂದಣಿ ಸಮಯದಲ್ಲಿ ಇ-ಆಸ್ತಿ ಸ್‌ಟಾವೇರ್‌ನಿಂದ ಮಾಹಿತಿ ಪಡೆದು ರಿಜಿಸ್ಟ್ರೇಷನ್ ಮಾಡಬೇಕಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸೆ.30ರಿಂದ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಈ ಅವಧಿಯನ್ನು ವಿಸ್ತರಣೆ ಮಾಡಿ ಹಂತಹಂತವಾಗಿ ಅನುಷ್ಠಾನ ಮಾಡಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನದ ದಿನಾಂಕ
-----------------------------
ಜಿಲ್ಲಾ ನೋಂದಣಿ ಕಚೇರಿ ದಿನಾಂಕ
------------------------------
ಬಸವನಗುಡಿ ಸೆ.30
ಗಾಂಧಿನಗರ ಅ.07
ಜಯನಗರ ಅ.14
ರಾಜಾಜಿನಗರ ಅ.21
ಶಿವಾಜಿನಗರ ಅ.28