

ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಂಎಐ) ಐಸಿಎಂಎಐ ಮತ್ತು ಸಿಎಂಎ ಪರೀಕ್ಷೆ (ಜೂನ್ 2020) ಯ ಆನ್ಲೈನ್ ಅರ್ಜಿ ಸಲ್ಲಿಕೆಯ ದಿನಾಂಕನ್ನು ಏಪ್ರಿಲ್ 20ರವರೆಗೆ ವಿಸ್ತರಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯಥಿರ್ಗಳು ಅಧಿಕೃತ ವೆಬ್ಸೈಟ್ https://icmai.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಇಲ್ಲ: ಸಿಎಂಎ ಪರೀಕ್ಷೆಯ ದಿನಾಂಕದ ಬಗ್ಗೆ ಐಸಿಎಂಎಐ ಯಾವುದೇ ಬದಲಾವಣೆಯನ್ನು ತಿಳಿಸಿಲ್ಲ. ಈ ಹಿಂದೆ ತಿಳಿಸಲಾದ ಪ್ರಕಾರ ಐ ಸಿಎಂಎಐ ಸಿಎಂಎ ಫೌಂಡೇಷನ್ ಪರೀಕ್ಷೆ (ಜೂನ್ 2020) ಜೂನ್ 11 ರಿಂದ 14 ವರೆಗೆ ಹಾಗೂ ಸಿಎಂಎ ಇಂಟರ್ಮೀಡಿಯೇಟ್ ಪರೀಕ್ಷೆ ಮತ್ತು ಅಂತಿಮ ಪರೀಕ್ಷೆ ಜೂನ್ 11 ರಿಂದ 18 ವರೆಗೆ ನಡೆಯಲಿದೆ.