

ಬೆಂಗಳೂರು: ಪಶುಸಂಗೋಪನಾ ಇಲಾಖೆ ಯಿಂದ ರಾಜ್ಯದಲ್ಲಿ ಹೆಚ್ಚುವರಿಯಾಗಿ 5,000 ಕೃತಕ ಗರ್ಭಧಾರಣೆ ಕೇಂದ್ರ ಗಾ ಸ್ಥಾಪಿಸಲು 250 ಕೋಟಿ ರೂ. ಅನುದಾನ, 125-150 ಪಶುಚಿಕಿತ್ಸಾ ವಾಹನ ಒದಗಿಸಬೇಕು ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಪಶುಸಂಗೋಪನಾ ಸಚಿವ ರಾಜೀವ್ ರಂಜನ್ ಸಿಂಗ್ ಅಧ್ಯಕ್ಷತೆಯಲ್ಲಿ ಒಡಿಶಾದ ಭುವನೇಶ್ವರದಲ್ಲಿ ಏರ್ಪಡಿಸಿದ್ದ ಮುಂಗಾರು ಸಭೆಯಲ್ಲಿ ಈ ಮನವಿ ಸಲ್ಲಿಸಿದರು. ಪ್ರಸ್ತುತ ಕೃತಕ ಗರ್ಭಧಾರಣೆ ಸೇವೆಯನ್ನು 15,000 ಗ್ರಾಮಗಳಲ್ಲಿ ಒದಗಿಸಲಾಗುತ್ತಿದೆ. ಇದನ್ನು ವಿಸ್ತರಿಸಲು ಅನುವಾಗುವಂತೆ 250 ಕೋಟಿ ರೂ. ಅನುದಾನ ಬಿಡುಗಡೆ ಎಂದು ಬೇಡಿಕೆ ಸಲ್ಲಿಸಿದ್ದಾರೆ.
ಸದರಿ ಸಭೆಯಲ್ಲಿ ಜಾನುವಾರು ನೀತಿ/ಕಾರ್ಯಕ್ರಮಗಳು/ಯೋಜನೆಗಳ ವಿವಿಧ ಅಂಶಗಳ ಕುರಿತು ಪ್ರಸ್ತುತಿಗಳು, ಚರ್ಚೆಗಳು ಮತ್ತು ಸಂವಾದಗಳು ನಡೆದವು.