ವಿಶ್ವ ಕೌಶಲ ಸ್ಪರ್ಧೆಯಲ್ಲಿ ಕರ್ನಾಟಕದ ನಾಲ್ವರಿಗೆ ಶ್ರೇಷ್ಠತಾ ಪದಕ;  ಸಚಿವ ಶರಣ ಪ್ರಕಾಶ್ ಪಾಟೀಲ ಶ್ಲಾಘನೆ

sk
Published on

ಬೆಂಗಳೂರು: ಫ್ರಾನ್ಸ್‌ನ ಲಿಯೋನ್‌ನಲ್ಲಿ ನಡೆದ ವಿಶ್ವ ಕೌಶಲ ಸ್ಪರ್ಧೆಯಲ್ಲಿ ಕರ್ನಾಟಕದ ನಾಲ್ವರು ಶ್ರೇಷ್ಠತಾ ಪದಕಗಳನ್ನು ಪಡೆದ್ದಿದ್ದರೆ. ಫ್ರಾನ್ಸ್‌ನ ಲಿಯೋನ್‌ನಲ್ಲಿ ನಡೆದ ವಿಶ್ವ ಕೌಶಲ ಸ್ಪರ್ಧೆಯಲ್ಲಿ ಕರ್ನಾಟಕದ 9 ಸ್ಪರ್ಧಿಗಳು ಭಾಗವಹಿಸಿದ್ದು, ಈ ಪೈಕಿ ಪ್ರೇಮ್, ಹರ್ಷವರ್ಧನ್, ಭಾನುಪ್ರಸಾದ್, ದರ್ಶನ್ ಗೌಡ 3 ಕೌಶಲ ಸ್ಪರ್ಧೆಯಲ್ಲಿ ಶ್ರೇಷ್ಠತಾ ಪದಕ ಪಡೆದಿದ್ದಾರೆ.

ಮೇ ತಿಂಗಳಿನಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಕರ್ನಾಟಕದಿಂದ 62 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಯುವ ಕೌಶಲ್ಯ ಸ್ಪರ್ಧೆಯಲ್ಲಿ 13 ಚಿನ್ನದ ಪದಕ, 12 ಬೆಳ್ಳಿ ಪದಕ, 4 ಕಂಚಿನ ಪದಕ ಹಾಗೂ 19 ಶ್ರೇಷ್ಠತಾ ಪದಕ ಗೆಲ್ಲುವುದರೊಂದಿಗೆ ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ 2ನೇ ಸ್ಥಾನ ಪಡೆದಿದೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕದ ಪ್ರೇಮ್ (ಆಡಿಟಿವ್ ಮ್ಯಾನುಫ್ಯಾಕ್ಚರಿಂಗ್), ಹರ್ಷವರ್ಧನ್ (ಕುಕ್ಕಿಂಗ್), ಭಾನುಪ್ರಸಾದ್, ದರ್ಶನ್ ಗೌಡ (ಮೆಕಾಟ್ರಾನಿಕ್ಸ್) ಫ್ರಾನ್ಸ್‌ನ ಲಿಯೋನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಅಲ್ಲಿಯೂ ತಮ್ಮ ಚಾಕಚಕ್ಯತೆ ತೋರಿದ ನಾಲ್ವರು ಶ್ರೇಷ್ಠತಾ ಪದಕ ಪಡೆದಿದ್ದಾರೆ.

ಕರ್ನಾಟಕದ ಸಾಧಕರಿಗೆ ಸಚಿವರ ಮೆಚ್ಚುಗೆ

ಫ್ರಾನ್ಸ್ ನ ಲಿಯೋನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಶ್ರೇಷ್ಠತಾ ಪದಕಗಳನ್ನು ಪಡೆದಿರುವ ಕರ್ನಾಟಕದ ಸಾಧಕರನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ ಅಭಿನಂದಿಸಿದ್ದಾರೆ.

ಪದಕ ವಿಜೇತರ ಅಸಾಧಾರಣ ಪ್ರತಿಭೆಯಿಂದ ಕರ್ನಾಟಕ ಕೌಶಲತೆ ಹಾಗೂ ನಿಪುಣತೆ ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ನಿಮ್ಮಂಥ ಪ್ರತಿಭೆಗಳಿಗೆ ಉತ್ತೇಜನ ನೀಡಲು ನಮ್ಮ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಇಲಾಖೆ ಸದಾ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಕೆ.ಎಸ್.ಡಿ.ಸಿ ಅಧ್ಯಕ್ಷ ಕಾಂತಾ ನಾಯ್ಕ , ಕೆ.ಎಸ್.ಡಿ.ಎ ಅಧ್ಯಕ್ಷ ಡಾ. ಇ.ವಿ. ರಮಣ ರೆಡ್ಡಿ, ಕೆ.ಎಸ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ.ಕನಗವಲ್ಲಿ, ಜಿ.ಟಿ.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ವೈ.ಕೆ. ದಿನೇಶ್ ಕುಮಾರ್, ಹಿರಿಯ ಅಧಿಕಾರಿಗಳಾದ ಕೃಷ್ಣ ಕುಮಾರ್, ಕೃಷ್ಣ ಗೌಡ ಹಾಗೂ ಇತರರು

ಕರ್ನಾಟಕದ ನಿಯೋಗದಲ್ಲಿದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net