ದಿನಕ್ಕೆ ಮೂವರಂತೆ ಪ್ರಜ್ವಲ್ ಐದು ವರ್ಷ ಇದನ್ನೇ ಮಾಡಿದ್ದಾನೆ: ಬಿಜೆಪಿ ನಾಯಕ ಶಿವರಾಮೇಗೌಡ

LR Shivarame Gowda
Published on

ಮಂಡ್ಯ: ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎಸ್​ಐಟಿ ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ ಹೊಸ ಆರೋಪಗಳು ಕೇಳಿ ಬರುತ್ತಿವೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ, ಬಿಜೆಪಿ ನಾಯಕ ಎಲ್​.ಆರ್. ಶಿವರಮೇಗೌಡ ಹೊಸ ಆರೋಪಗಳನ್ನು ಮಾಡಿದ್ದಾರೆ.

ಮಂಡ್ಯದಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಶಿವರಾಮೇಗೌಡ, ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿ ಕೂಡ ಕಡಿಮೆ. ಬ್ಲೂ ಫಿಲ್ಮ್ ಮಾಡುವವರ ಬಳಿಯೂ ಇಷ್ಟೊಂದು ವಿಡಿಯೋಗಳು ಇರುವುದಿಲ್ಲ. ಎಂಪಿಯಾಗಿ ಐದು ವರ್ಷ ಏನನ್ನು ಮಾಡಿಲ್ಲ. ದಿನಕ್ಕೆ ಮೂವರಂತೆ ಐದು ವರ್ಷ ಇದನ್ನೇ ಮಾಡಿದ್ದಾನೆ. ನಮ್ಮಂತವರನ್ನು ತುಳಿದ ಪಾಪದಿಂದ ದೇವೇಗೌಡರಿಗೆ ಇಂತಹ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದ್ದಾರೆ.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕೂಡಲೇ ಸಂತ್ರಸ್ಥೆಯರ ಪರವಾಗಿ ಹೋರಾಟ ಮಾಡಬೇಕು. ಅಲ್ಲದೇ ಜೆಡಿಎಸ್​ ಪಕ್ಷವನ್ನು ಎನ್​ಡಿಎ ಮೈತ್ರಿಕೂಟದಿಂದ ಹೊರಹಾಕಬೇಕು. ಹಾಸನದಲ್ಲಿ ನಡೆದಿದ್ದ ಘಟನೆ ಇಂಗ್ಲೆಂಡ್​ನಲ್ಲೂ ನಡೆದಿತ್ತು. ರೇವಣ್ಣ ಇದೇ ರೀತಿ ಇಂಗ್ಲೆಂಡ್​ನಲ್ಲೂ ಸಿಕ್ಕಿಬಿದ್ದಿದ್ದರು. ಎಸ್​ಐಟಿ ತಂಡ ಇಂಗ್ಲೆಂಡ್​ಗೆ ಹೋಗಿ ತನಿಖೆ ಮಾಡಲಿ ಎಂದು ಸಂಸದ ಶಿವರಾಮೇಗೌಡ ಆಗ್ರಹಿಸಿದ್ದಾರೆ.

ಪ್ರಜ್ವಲ್​ ರೇವಣ್ಣ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಮಾಜಿ ಸಂಸದ, ಒಂದು ಕಾಲದಲ್ಲಿ ದೇವೇಗೌಡರ ಕುಟುಂಬದ ಪರಮಾಪ್ತ ಶಿವರಾಮೇಗೌಡ ಹೇಳಿಕೆ ಸಂಚಲನ ಮೂಡಿಸಿದ್ದು, ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net