75ನೇ ವಯಸ್ಸಲ್ಲಿ ಮತ್ತೆ ಮದುವೆಯಾದ ಮಾಜಿ ಮೇಯರ್; ಪತ್ನಿ ತೀರಿದ 3 ತಿಂಗಳಲ್ಲಿ ಆಕೆಯ ಅಕ್ಕನೊಂದಿಗೆ ವಿವಾಹ

Chavan
Published on

ಹುಬ್ಬಳ್ಳಿ: ಮಾಜಿ ಮೇಯರೊಬ್ಬರು ತಮ್ಮ 75ನೇ ವಯಸ್ಸಿನಲ್ಲಿ ಇನ್ನೊಂದು ಮದುವೆಯಾಗಿದ್ದಾರೆ. ಹೀಗೆ ಇನ್ನೊಮ್ಮೆ ಹಸೆಮಣೆಗೆ ಏರಿದವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್​ ಡಿ.ಕೆ.ಚವ್ಹಾಣ.

ಚವ್ಹಾಣ ಅವರ ಮೊದಲ ಪತ್ನಿ ಶಾರದಾ ಮೂರು ತಿಂಗಳ ಹಿಂದೆ ತೀರಿಹೋಗಿದ್ದರು. ಪತ್ನಿಯ ಅಗಲಿಕೆಯ ಬಳಿಕ ಆಕೆಯ ಅಕ್ಕ ಅನಸೂಯಾ ಅವರನ್ನು ಚವ್ಹಾಣ ಅವರು ಮದುವೆಯಾಗಿದ್ದಾರೆ. ಈ ಮೂಲಕ ಎರಡನೇ ಸಲ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡಿದ್ದಾರೆ.

ಚವ್ಹಾಣ ಅವರ ಮನೆಯ ಮುಂದೆಯೇ ಈ ವಿವಾಹ ಸಮಾರಂಭ ನಡೆದಿದೆ. ಮಾಜಿ ಮೇಯರ್ ಅವರ ಈ ಮದುವೆ ಸಂಭ್ರಮದಲ್ಲಿ ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಕೂಡ ಭಾಗಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net