ನಡುರಸ್ತೆಯಲ್ಲೆ ಮಾಜಿ ಕಾರ್ಪೊರೇಟರ್​​ ಹತ್ಯೆ; ಸಿಸಿಟಿವಿ ದೃಶ್ಯದಿಂದ ಬಯಲಾಯ್ತು ಸ್ಫೋಟಕ ಮಾಹಿತಿ

Untitled-design-30
Published on

ಪುಣೆ: ಅಜಿತ್ ಪವಾರ್ ಬಣದ ಎನ್‌ಸಿಪಿ ಮುಖಂಡರೊಬ್ಬರಾದ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಒಬ್ಬರನ್ನು ನಡುರಸ್ತೆಯಲ್ಲಿ ಬೈಕ್​ನಲ್ಲಿ ಬಂದ ಗುಂಪೊಂದು ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನಗರದ ನಾನಾ ಪೇಠ್ ಪ್ರದೇಶದಲ್ಲಿ ಭಾನುವಾರ(ಸೆಪ್ಟೆಂಬರ್​​ 1) ರಾತ್ರಿ ಈ ದುರ್ಘಟನೆ ನಡೆದಿದೆ.

ದಾಳಿಯಲ್ಲಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್​​​ ವನರಾಜ್​​ ಅಂದೇಕರ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೆ ಮೃತಪಟ್ಟಿದ್ದರು. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದಾಳಿ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗಿದೆ.

ಆರು ದ್ವಿಚಕ್ರ ವಾಹನಗಳಲ್ಲಿ ಬಂದ 12 ಜನರು ಹಠಾತ್​ ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ಅಂದೇಕರ್ ಅವರು ಒಬ್ಬರೆ ಇದ್ದರೂ ಎನ್ನಲಾಗಿದೆ. ಈ ದಾಳಿಯ ದೃಶ್ಯವು ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೈಪ್ರೊಫೈಲ್ ಹತ್ಯೆ ತನಿಖೆಯನ್ನು ಪುಣೆ ಕ್ರೈಂಬ್ರಾಂಚ್ ನಡೆಸುತ್ತಿದೆ. ದಾಲಿ ಮೊದಲು ಪ್ರಿಪ್ಲ್ಯಾನ್​ ಮಾಡಿದ್ದ ಹಂತಕರು ಸ್ಥಳದಲ್ಲಿ ವಿದ್ಯುತ್​ ಕಟ್​ ಮಾಡಿದ್ದಾರೆ. ಇದ್ದರಿಂದ ಬೀದಿ ದೀಪಗಳು ಆಫ್​ ಆಗಿವೆ.

ವನರಾಜ್ ಅಂದೇಕರ್ ​​ಅವರ ಮೇಲೆ ಐದು ಸುತ್ತು ಗುಂಡು ಹಾರಿಸಲಾಗಿದೆ. ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅವರು ಮೃತಪಟ್ಟಿರುವುದು ದೃಢವಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಂದೇಕರ್‌ಗೆ ಹಲವು ಚೂಪಾದ ಆಯುಧಗಳಿಂದ ಮಾಡಿರುವ ಗಾಯಗಳಾಗಿವೆ. ತನಿಖೆ ನಡೆಯುತ್ತಿದೆ ಹೆಚ್ಚಿನ ವಿವರಗಳನ್ನುಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ರಂಜನ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ದಾಳಿಕೋರರ ಮೇಲೆ ಏನೋ ಎಸೆದಿರುವುದು ಕಂಡುಬಂದರೂ ಅವರಿಗೆ ಏನು ತಾಗಿಲ್ಲ. ಸ್ಥಳದಲ್ಲಿ ಇಬ್ಬರು ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿದ್ದ ವಯಸ್ಕರು ಯಾವುದೇ ಹಾನಿಯಾಗದಂತೆ ತಪ್ಪಿಸಿಕೊಂಡಿರುವುದ ತಿಳಿದಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net