ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲುಪಾಲಾದ ಮಾಜಿ ಸಿಎಂಗಳು ಯಾರೆಲ್ಲಾ ಗೊತ್ತೇ? ಇಲ್ಲಿದೆ ನೋಡಿ ಮಾಹಿತಿ

Untitled design (16)
Published on

ಬೆಂಗಳೂರು: ಅನೇಕ ರಾಜಕಾರಣಿಗಳು ಯಾವುದಾದರೂ ಒಂದು ವಿಚಾರಕ್ಕೆ ಕ್ರಿಮಿನಲ್ ಪ್ರಕರಣದಡಿ ಬಂಧನಕ್ಕೆ ಒಳಪಟ್ಟಿರುತ್ತಾರೆ. ಕಾರಣಗಳು ವಿವಿಧ ರೀತಿ ಇದ್ದರೂ ಸೆರೆಮನೆ ವಾಸ ಅನುಭವಿಸಿರುತ್ತಾರೆ. ರಾಜಕೀಯ ವಲಯದಲ್ಲಿ ಆಡಳಿತರೂಢ ಹಾಗೂ ವಿರೋಧ ಪಕ್ಷಗಳ ನಡುವೆ ಆಪಾದನೆ, ಆರೋಪಗಳು ಕೇಳಿಬರುತ್ತವೆ. ಹಣ ವಂಚನೆ ಪ್ರಕರಣ, ಅಕ್ರಮ ಹಣ ವರ್ಗಾವಣೆ ಹೀಗೆ ಕ್ರಿಮಿನಲ್ ಕೇಸ್​ಗಳಲ್ಲಿ ಸಿಲುಕಿ ಜೈಲು ಪಾಲಾದ ರಾಜಕೀಯ ನಾಯಕರನ್ನು ನಾವು ನೋಡಿದ್ದೇವೆ.

ಆದರೆ, ಮುಖ್ಯಮಂತ್ರಿ ಗದ್ದುಗೆ ಏರಿದ ಬಳಿಕವೂ ಕೆಲವು ನಾಯಕರು ಕ್ರಿಮಿನಲ್ ಪ್ರಕರಣಗಳಡಿ ಜೈಲಿಗೆ ಹೋದ ಘಟನೆಗಳು ಈ ಹಿಂದೆ ನಡೆದಿದ್ದು, ಕಳೆದ ವರ್ಷ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಸಹ ನಡೆದಿರುವುದರ ಬಗ್ಗೆ ನಾವೆಲ್ಲಾ ಅರಿತಿದ್ದೇವೆ. ಹಾಗಾದ್ರೆ, ಈ ಸಾಲಿನಲ್ಲಿ ಯಾರೆಲ್ಲಾ ಇದ್ದಾರೆ? ಯಾವ ರಾಜ್ಯದ ಸಿಎಂಗಳು ಈ ಕೇಸ್​ನಲ್ಲಿ ಜೈಲು ವಾಸ ಅನುಭವಿಸಿದರು ಎಂಬುದರ ಪಟ್ಟಿಯನ್ನು 'ದಿ ಇಂಡಿಯನ್ ಇಂಡೆಕ್ಸ್'​ ಪ್ರಕಟಿಸಿದೆ. ಅದರ ಮಾಹಿತಿ ಈ ಕೆಳಕಂಡಂತಿದೆ.

1. ಹೇಮಂತ್ ಸೊರೆನ್, ಜಾರ್ಖಂಡ್

2. ಶಿಬು ಸೊರೆನ್, ಜಾರ್ಖಂಡ್

3. ಮಧು ಕೋಡಾ, ಜಾರ್ಖಂಡ್

4. ಲಾಲು ಯಾದವ್, ಬಿಹಾರ

5. ಜಗನ್ನಾಥ ಮಿಶ್ರಾ, ಬಿಹಾರ

6. ಜೆ. ಜಯಲಲಿತಾ, ತಮಿಳುನಾಡು

7. ಓಂ ಪ್ರಕಾಶ್ ಚೌತಾಲಾ, ಹರಿಯಾಣ

8. ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net