ಬಿಜೆಪಿ ಬಿಟ್ಟ ಬೆನ್ನಲ್ಲೇ ಮತ್ತೊಂದು ದೃಢ ನಿರ್ಧಾರ ತೆಗೆದುಕೊಂಡ ಮಾಜಿ ಸಿಎಂ ಜಗದೀಶ್​ ಶೆಟ್ಟರ್​!

Jagadeesha Shetter
Published on

ಹುಬ್ಬಳ್ಳಿ: ಬಿಜೆಪಿಗೆ ಗುಡ್​ ಬೈ ಹೇಳಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ದೃಢ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ರಾಜಕೀಯ ನಿವೃತ್ತಿ ಘೋಷಣೆ

ಶೆಟ್ಟರ್​ ಅವರು ಚುನಾವಣೆಗೂ ಮುನ್ನವೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದು‌ ನನ್ನ‌ ಕೊನೆಯ ಚುನಾವಣೆ, ಇದೊಂದು ಬಾರಿಗೆ ನನಗೆ ಅವಕಾಶ ಮಾಡಿಕೊಡಿ ಎಂದು ಕರಪತ್ರಗಳ ಮುಖಾಂತರವೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಅಧಿಕಾರಕ್ಕೆ ದುಂಬಾಲು ಬಿದ್ದಿಲ್ಲ

ನಾನು ಓರ್ವ ಜನಪ್ರತಿನಿಧಿಯಾಗಿ ಅನೇಕ ಸಾಧನೆ ಮಾಡಿದ್ದೇನೆ. ನಾನು ಅಧಿಕಾರಕ್ಕಾಗಿ ಪಕ್ಷ ಬಿಟ್ಟಿದ್ದೇನೆ ಎಂಬ ಅಪಪ್ರಚಾರ ಭರಾಟೆಯಿಂದ ಸಾಗಿದೆ. ಅದರ ನಾನು ಬಗ್ಗೆ ನಾನು ತೆಲೆ ಕೆಡಿಸಿಕೊಂಡಿಲ್ಲ. ನಾನು ಎಂದೂ ಕೂಡ ಅಧಿಕಾರಕ್ಕೆ ದುಂಬಾಲು ಬಿದ್ದಿಲ್ಲ. ರಾಜಕೀಯ ಜೀವನ ಆರಂಭದಿಂದಲೂ ತತ್ವ, ಸಿದ್ಧಾಂತ ಆಧಾರದ ರಾಜಕಾರಣ ಮಾಡಿಕೊಂಡು ಬಂದವನು.

ನನ್ನ‌ ಕಟ್ಟ ಕಡೆಯ ಚುನಾವಣೆ

ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿರುವುದು ನಿರ್ದಿಷ್ಟ ಉದ್ದೇಶಕ್ಕಾಗಿ. ಕುಲಗೆಟ್ಟು ಹೋಗುತ್ತಿರುವ ವ್ಯವಸ್ಥೆಯಲ್ಲಿ ಪರಿವರ್ತನೆ ಆಗಬೇಕಿದೆ. ಇದು ನನ್ನ‌ ಕಟ್ಟ ಕಡೆಯ ಚುನಾವಣೆಯಾಗಿದೆ. 7ನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ನಾನು ಗೆದ್ದೇ ಗೆಲ್ಲುತ್ತೇನೆ. ಈ ಅವಧಿ ಮುಗಿದ ಬಳಿಕ ಚುನಾವಣಾ ರಾಜಕಾರಣದಿಂದ ನಿರ್ಗಮಿಸುತ್ತೇನೆ ಎಂದು ಕರಪತ್ರದಲ್ಲಿ ಶೆಟ್ಟರ್​ ಉಲ್ಲೇಖ ಮಾಡಿದ್ದಾರೆ.

ನನ್ನ ಈ ಮಾತುಗಳಿಗೆ ನಾನು ಕಟಿಬದ್ಧನಾಗಿದ್ದೇನೆಂದು ವಿರೋಧಿಗಳಿಗೆ ರಾಜಕೀಯ ನಿವೃತ್ತಿ ಮುಖಾಂತರವೇ ಶೆಟ್ಟರ್ ಟಕ್ಕರ್ ಕೊಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net