ಪ್ರತಿಯೊಬ್ಬರೂ ‘ಮನಸ್ಸಿನ ಅದ್ಭುತ’ವನ್ನು ಅನುಭವಿಸಬೇಕು: ವಿಶ್ವ ಧ್ಯಾನ ದಿನದಂದು ಸದ್ಗುರುಗಳ ಸಂದೇಶ

Sadhguru
Published on

ಧ್ಯಾನದ ಪರಿವರ್ತಕ ಶಕ್ತಿಯನ್ನು ಗುರುತಿಸಿದ ವಿಶ್ವಸಂಸ್ಥೆಯು ಒಂದು ಐತಿಹಾಸಿಕ ಹೆಜ್ಜೆಯಾಗಿ, ಡಿಸೆಂಬರ್ 21 ಅನ್ನು `ವಿಶ್ವ ಧ್ಯಾನ ದಿನ’ ಎಂದು ಘೋಷಿಸಿದೆ. ಇಂದಿನ ಜಗತ್ತಿನಲ್ಲಿ ಇದರ ಮಹತ್ವವನ್ನು ಒತ್ತಿ ಹೇಳುವ ಸಂದೇಶವನ್ನು ಸದ್ಗುರುಗಳು ಹಂಚಿಕೊಂಡಿದ್ದಾರೆ. Xನಲ್ಲಿ ಸದ್ಗುರುಗಳ ಸಂದೇಶ, “ಧ್ಯಾನವೆಂಬ ಪ್ರಕ್ರಿಯೆಯಲ್ಲಿ ನಿಮ್ಮ ಮನಸ್ಸು ಅದ್ಭುತವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ನೀವು ಕಲಿಯುತ್ತೀರಿ. ಪ್ರಪಂಚದಾದ್ಯಂತ ತಜ್ಞರು ಮಾನಸಿಕ ಆರೋಗ್ಯದ ಸಾಂಕ್ರಾಮಿಕವೊಂದು ರೂಪುಗೊಳ್ಳುತ್ತಿದೆ ಎಂದು ಮುನ್ಸೂಚನೆ ನೀಡುತ್ತಿರುವ ಸಮಯದಲ್ಲಿ, ಮಾನಸಿಕ ಆರೋಗ್ಯ, ಭಾವನಾತ್ಮಕ ಸ್ಥಿರತೆ ಮತ್ತು ಸಮತೋಲನವನ್ನು ಸೃಷ್ಟಿಸುವ ಸಾಧನವಾಗಿ ವಿಶ್ವಸಂಸ್ಥೆಯು ಧ್ಯಾನವನ್ನು ಗುರುತಿಸಿರುವುದು ಶ್ಲಾಘನೀಯ. ಭೂಮಿಯ ಮೇಲಿನ ಪ್ರತಿಯೊಬ್ಬರೂ ಮನಸ್ಸಿನ ಅದ್ಭುತ ( ಮಿರಾಕಲ್ ಆಫ್ ಮೈಂಡ್)ಅನ್ನು ಅನುಭವಿಸಬೇಕು ಎನ್ನುವುದು ನನ್ನ ಆಶಯ ಮತ್ತು ಆಶೀರ್ವಾದ. ಇದನ್ನು ಸಾಕಾರಗೊಳಿಸೋಣ.” ಸದ್ಗುರುಗಳು “ಡಿಸೆಂಬರ್ 21 ಅನ್ನು ‘ವಿಶ್ವ ಧ್ಯಾನ ದಿನ’ ಎಂದು ಘೋಷಿಸಿರುವುದು ಮಹತ್ವದ ಹೆಜ್ಜೆ, ಏಕೆಂದರೆ ಮಾನವೀಯತೆ ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆಗಳೆಂದರೆ ಮಾನಸಿಕ ಸ್ಥಿರತೆ, ಸಮತೋಲನ ಮತ್ತು ಆರೋಗ್ಯದ ಬಗ್ಗೆ” ಎಂದ ಸದ್ಗುರುಗಳು, “ತಜ್ಞರು ಮಾನಸಿಕ ಆರೋಗ್ಯದ ಸಾಂಕ್ರಾಮಿಕವೊಂದರ ಮುನ್ಸೂಚನೆ ನೀಡುತ್ತಿರುವ ಈ ಸಮಯದಲ್ಲಿ, ವಿಶ್ವಸಂಸ್ಥೆಯು ಮಾನಸಿಕ ಆರೋಗ್ಯ, ಭಾವನಾತ್ಮಕ ಸ್ಥಿರತೆ ಮತ್ತು ಸಮತೋಲನವನ್ನು ಸೃಷ್ಟಿಸಲು ಧ್ಯಾನವನ್ನು ಸಾಧನವಾಗಿ ವಿಶ್ವಸಂಸ್ಥೆ ಗುರುತಿಸಿರುವುದು ಶ್ಲಾಘನೀಯ.” ಎಂದು ಹೇಳಿದರು. ಮನಸ್ಸನ್ನು “ಒಂದು ಅತ್ಯದ್ಭುತ ಪವಾಡ" ಎಂದು ಕರೆದ ಸದ್ಗುರುಗಳು, ಮಾನವ ಮನಸ್ಸಿನ ಸಂಪೂರ್ಣ ಸಾಮರ್ಥ್ಯವನ್ನು ತೆರೆಯುವಲ್ಲಿ ಧ್ಯಾನವು ಮಹತ್ವದ ಪಾತ್ರ ವಹಿಸುತ್ತದೆ ಒತ್ತಿ ಹೇಳಿದರು. “ಸರಿಯಾದ ಸಾಧನಗಳ ಕೊರತೆಯಿಂದಾಗಿ ಅದನ್ನು ಹಲವರು ದುಃಖದ ಮೂಲವಾಗಿ ಅನುಭವಿಸುತ್ತಾರೆ, ಧ್ಯಾನವೆಂಬ ಪ್ರಕ್ರಿಯೆಯಲ್ಲಿ ನೀವು ಈ ಮನಸ್ಸನ್ನು ಅದ್ಭುತವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಕಲಿಯುತ್ತೀರಿ” ಎಂದರು.

ಜಾಗತಿಕ ಅಭಿಯಾನದ ಭಾಗವಾಗಿ, ಸದ್ಗುರುಗಳು ಮುಂದಿನ ವರ್ಷ ಆರಂಭದಲ್ಲಿ “ಮಿರಾಕಲ್ ಆಫ್ ಮೈಂಡ್” ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಈ ಆ್ಯಪ್ ನಲ್ಲಿ ನಿಮ್ಮ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಉಲ್ಲಾಸವನ್ನು ತರಲು, ಎಲ್ಲೆಡೆ ಮಾಡಬಹುದಾದ ಸರಳ ಧ್ಯಾನ ಪ್ರಕ್ರಿಯೆ ಇರುತ್ತದೆ.

“ಪರಿವರ್ತನೆಯ ಸಾಧನಗಳನ್ನು ಜಗತ್ತಿಗೆ ಕೊಂಡೊಯ್ಯುವಲ್ಲಿ ಮತ್ತೊಮ್ಮೆ ಭಾರತವು ಮುಂಚೂಣಿಯಲ್ಲಿರುವುದು ಅದ್ಭುತ. ಸಂತೋಷ, ಆರೋಗ್ಯ ಮತ್ತು ಉತ್ಸಾಹಭರಿತ ಮಾನವ ಪೀಳಿಗೆಯ ಸೃಷ್ಟಿಯಲ್ಲಿ ಇದು ಬಹಳ ಪ್ರಮುಖ ಮತ್ತು ಮಹತ್ವದ ಹೆಜ್ಜೆ,” ಎಂದ ಸದ್ಗುರುಗಳು, ವಿಶ್ವಸಂಸ್ಥೆ, ಭಾರತ ಸರ್ಕಾರ ಮತ್ತು ಈ ನಿರ್ಣಯವನ್ನು ಬೆಂಬಲಿಸಿದ ಎಲ್ಲಾ ರಾಷ್ಟ್ರಗಳನ್ನು ಅಭಿನಂದಿಸಿದರು.

ಮೂರು ದಶಕಗಳಿಗಿಂತ ಹೆಚ್ಚಿನ ಸಮಯದಿಂದ ಸದ್ಗುರುಗಳು, ಜಗತ್ತಿನ ಲಕ್ಷಾಂತರ ಜನರಿಗೆ ಪ್ರಯೋಜನ ತರುವ ಗಹನವಾದ ಯೋಗ ಮತ್ತು ಧ್ಯಾನ ಸಾಧನಗಳನ್ನು ಅರ್ಪಿಸಿದ್ದಾರೆ. ಪ್ರಮುಖ ವಿಶ್ವವಿದ್ಯಾನಿಲಯಗಳ ಸಂಶೋಧನೆಯಂತೆ ಸುಧಾರಿತ ನಿದ್ರೆಯ ಗುಣಮಟ್ಟ, ಒತ್ತಡದ ಮಟ್ಟದಲ್ಲಿ ಶೇಕಡ 50 ರಷ್ಟು ಇಳಿಕೆ ಮತ್ತು ಹೆಚ್ಚಿದ ಜೀವಶಕ್ತಿ, ಸಾಮರ್ಥ್ಯ ಮತ್ತು ಆನಂದದ ಮಟ್ಟದಲ್ಲಿ ಹೆಚ್ಚಳವನ್ನು ತರುವ ’ಈಶ ಇನ್ನರ್ ಇಂಜಿನಿಯರಿಂಗ್’ ಯೋಗ ಕಾರ್ಯಕ್ರಮದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ.

ಎಲ್ಲರಿಗೂ ಲಭ್ಯವಿರುವ 12 ನಿಮಿಷಗಳ ಉಚಿತ ಮಾರ್ಗದರ್ಶಿತ ಧ್ಯಾನವಾದ ’ಈಶ ಕ್ರಿಯಾ’, ಸದ್ಗುರು ಆ್ಯಪ್ ನಲ್ಲಿ ಇರುವ ಅನೇಕ ವಿಶಿಷ್ಟ ಅಭ್ಯಾಸಗಳಲ್ಲಿ ಒಂದು, ಇದು ಅನೇಕ ಜನರಿಗೆ ದಿನವೂ ಜೀವನವನ್ನು ಪರಿವರ್ತಿಸಬಲ್ಲ ಪ್ರಯೋಜನಗಳನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಪ್ರಜ್ಞಾಪೂರ್ವಕವಾಗಿ "ಏನೂ ಮಾಡದಿರುವ" ಸುಲಭ ಪ್ರಕ್ರಿಯೆಯಾದ “ಶೂನ್ಯ ಧ್ಯಾನ” ಮತ್ತು ಪ್ರಜ್ಞೆಯ ಉನ್ನತ ಸ್ಥಿತಿಯನ್ನು ತಲುಪಲು ಅನುವು ಮಾಡಿಕೊಡುವ “ಸಂಯಮ” ಸೇರಿದಂತೆ ಉನ್ನತ ಧ್ಯಾನ ಕಾರ್ಯಕ್ರಮಗಳನ್ನು ಸಹ ಸದ್ಗುರುಗಳು ಅರ್ಪಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net