ಪ್ರತಿಯೊಬ್ಬರೂ ರಸ್ತೆ ನಿಯಮ ಪಾಲಿಸಿ

klr sapthaha
ಬೆಂಗಳೂರು ಕೋಲಾರ ಹೆದ್ದಾರಿಯಲ್ಲಿ ಖಾಸಗಿ ಕಂಪನಿಯಿಂದ ಉಚಿತ ಹೆಲ್ಮೆಟ್​ ವಿತರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ವೇಳೆ ದ್ವಿಚಕ್ರ ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಯಿತು.
Published on

ಕೋಲಾರ: ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಹೆಲ್ಮೆಟ್​ ಕಡ್ಡಾಯ ಧರಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ನರಸಾಪುರ ಕೈಗಾರಿಕಾ ಪ್ರದೇಶದ ಅಡ್ವಿಕ್​ ಹೈ ಟೆಕ್​ ಪೆವೇಟ್​ ಲಿಮಿಟೆಡ್​ ಕಂಪನಿ ವತಿಯಿಂದ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಿ, ಬೈಕ್​ ಜಾಥಾ ನಡೆಸಿ ವಾಹನ ಸವಾರರಿಗೆ ಉಚಿತ ಹೆಲ್ಮೆಟ್​ ವಿತರಿಸಿದರು.

ವೇಮಗಲ್​ ಸರ್ಕಲ್​ ಇನ್​ಸ್ಪೆಕ್ಟರ್​ ಬಿ.ಪಿ ಮಂಜುನಾಥ್​ ಮಾತನಾಡಿ, ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು. ರಸ್ತೆ ಅಪಘಾತ, ಸಾವು-&ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮ ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವುದು ಸಪ್ತಾಹದ ಮುಖ್ಯ ಉದ್ದೇಶ. ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸುರಕ್ಷಿತ ಪ್ರಯಾಣದ ಕಡೆ ಗಮನ ಹರಿಸಬೇಕು ಎಂದರು.

ಕಂಪನಿಯ ಸಂಪನ್ಮೂಲ ಅಧಿಕಾರಿ ಮಾನಸ್​ ಮಾತನಾಡಿ, ಕಂಪನಿಯ ಸಿ.ಎಸ್​.ಆರ್​ ಅನುದಾನದಲ್ಲಿ ಸುಮಾರು 50 ಉಚಿತ ಹೆಲ್ಮೆಟ್​ ಗಳನ್ನು ವಿತರಿಸಲಾಗಿದ್ದು, ಪ್ರತಿ ವರ್ಷ ಕಂಪನಿಯ ಸಿಬ್ಬಂದಿಗೆ ಮಾತ್ರವೇ ನೀಡುತ್ತಿದ್ದು ಈ ವರ್ಷ ಹೊರಗಿನ ವಾಹನ ಸವಾರರಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು,

ಹೆಲ್ಮೆಟ್​ ನೀಡಿದ ಗಣಪತಿ

ನರಸಾಪುರ ಕೈಗಾರಿಕಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್​ ರಸ್ತೆಯಲ್ಲಿ ಹೆಲ್ಮೆಟ್​ ಧರಿಸದೆ ಸವಾರಿ ಮಾಡುತ್ತಿದ್ದ ಸವಾರರಿಗೆ ಮೊದಲು ಗುಲಾಬಿ ಹೂವು ಕೊಟ್ಟು ಜಾಗೃತಿ ಮೂಡಿಸಲಾಯಿತು. ನಂತರ ಗಣಪತಿ ವೇಷ ಧರಿಸಿದವರೊಬ್ಬರು ಸ್ವತ@ ಹೆಲ್ಮೆಟ್​ ಹಾಕದವರನ್ನು ಹಿಡಿದು ಉಚಿತವಾಗಿ ಹೆಲ್ಮೆಟ್​ ನೀಡಿ, ಸಂಚಾರ ನಿಮಯಗಳ ಅರಿವು ಮೂಡಿಸಿದ್ದು ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net