VIDEO |ನೇರವಾದ ಮರದಿಂದ ಚಿರತೆ ಇಳಿಯುವ ದೃಶ್ಯ ನೋಡಿದ್ದೀರಾ?

lepord
Published on

ಶಿಮ್ಲಾ: ಚಿರತೆ ನೇರವಾಗಿ ಬೆಳೆದಿರುವ ಸಣ್ಣ ಮರದಿಂದ ಕೆಳಗಿಳಿಯುವ ಅಪರೂಪದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ (ಐಎಫ್​ಎಸ್​) ಪರ್ವೀನ್​ ಕಸ್ವಾನ್​ ಅವರು ತಮ್ಮ ಟ್ವಿಟರ್​ ಖಾತೆಗೆ 30 ಸೆಕೆಂಡುಗಳ ವಿಡಿಯೋ ಅಪ್​ ಲೋಡ್​ ಮಾಡಿದ್ದಾರೆ. ಚಿರತೆ ಮರದಿಂದ ಇಳಿಯುವ ದೃಶ್ಯ ವೈರಲ್​ ಆಗಿದೆ.

ನೇರ ಹಾಗೂ ತುಂಬಾ ಎತ್ತರದ ಮರದಿಂದ ಚಿರತೆ ಇಳಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಎಂದು ಶೀರ್ಷಿಕೆ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದವರು ಉತ್ರಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಪ್ರಾಣಿಗಳ ಬದುಕಿನ ಅಪರೂಪದ ಕ್ಷಣಗಳನ್ನು ಪರಿಚಯಿಸುವ ಈ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಂದಿ ವೀಕ್ಷಣೆ ಮಾಡುತ್ತಾರೆ. ಹೀಗಾಗಿ ಈ ರೀತಿಯ ವಿಡಯೋಗಳು ವೈರಲ್​ ಆಗುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net