"ಪ್ರುಬ್ಧತೆ' (ರಂಗನಾಥ ಟಿ.ಕೆ, ರಾಜೇಶ್ವರಿ ಶಿವಮೊಗ್ಗ, ಸರಿತಾ ಸಂಗಂ, ಹೊನ್ನಿ ಭಟ್ಟ, ಎನ್.ಆರ್ ರಮೇಶ್, ಶ್ರೀನಾಥ್ ಕೆ.ಟಿ, ಶಿವಕುಮಾರ್ ಸಿಂಗಟಗೆರೆ, ಜಿ.ಎಚ್ ಸಂಕಪ್ಪ, ಮಂಜುನಾಥ ಜಾಲವಾದಿ, ನಟರಾಜು ಬಿ.ಎಸ್, ಅಂಜಲಿ ಭರವೆ, ಕೆ.ಅಮರ್, ಸಂಜೀವ ಮತ್ತಿಕೊಪ್ಪ, ಜಿ.ನಾರಾಯಣ ರಾವ್, ಅಶೋಕಕುಮಾರ್ ಕಿಣಿ, ಆನಂದರಾಮ ಮಡಿ, ಡಾ.ಎನ್.ಎಂ ತುಳಪುಳೆ, ಡಾ.ರಂಗನಾಥ ಕಟ್ಟಿ, ಎನ್.ಎಸ್ ಭುಜಂಗರಾವ್, ಶ್ಯಾಮರಾಜ ಉಡುಪ ಮುಂತಾದವರು) ಸಹ Turbulenceಗೆ ಸಂವಾದಿಯಾಗಿ ಬಳಸಬಹುದಾದ ಪದ. "ಅಲ್ಲೋಲಕಲ್ಲೋಲ' (ನಾಗಮಣಿ ಎನ್.ಶಾಂಪುರ್, ಪ್ರಮೋದಕುಮಾರ್ ಜೋಶಿ, ಕೆ.ಎ ಭಟ್, ಎಚ್.ಎಸ್ ಮಂಜುನಾಥ, ಯಶೋದಾ ಎಂ.ಗೋಪಿ ಮುಂತಾದವರು) ಕೂಡ ಸೂಕ್ತವಾಗಿ ಬಳಸಬಹುದು. ಸಂಸ್ಕೃತದಲ್ಲಿ ಉಲ್ಲೋಲ ಅಂದರೆ ದೊಡ್ಡ ಅಲೆ, ಬಹಳ ಚಂಚಲವಾದ, ಅತಿಯಾಗಿ ಅಲುಗಾಡುವ ಎಂದರ್ಥ. ಕನ್ನಡಕ್ಕೆ ಬಂದಾಗ ಅಲ್ಲೋಲ ಆಗಿದೆ, ಜತೆಯಲ್ಲಿ ಜೋಡಿಪದವಾಗಿ ಕಲ್ಲೋಲ ಸೇರಿಕೊಂಡಿದೆ. "ಅಲ್ಲಕಲ್ಲೋಲ' ಎಂಬ ರೂಪದಲ್ಲೂ ಬಳಕೆಯಿದೆ. "ಏರುಪೇರು' (ಅನಂತರಾಜ ಮೇಲಾಂಟ, ದೇವೇಂದ್ರ ಕಡೂರು, ಚ.ರು ಶಂಕರರಾವ್), "ಅಯೋಮಯ' (ಸಿಂಹ ಕೆ.ಎಸ್, ವಿಜಯಕಲ ವಿಟ್ಲ), "ವಿಪ್ಲವ' (ಆನಂದ ಗೋಡಸೆ), "ಕದಡಿಕೆ' (ನರೇಂದ್ರನಾಥ ಎಚ್.ಎಂ) ಮತ್ತು ಅನುಕರಣ ಶಬ್ದದಂತೆ ಕಂಡರೂ "ದಡಬಡ' (ಎನ್.ಸುಬ್ರಾಯ ಭಟ್) ಇವೂ Turbulenceನ ಚಿತ್ರಣ ತರುವಲ್ಲಿ ಯಶಸ್ವಿಯಾಗುತ್ತವೆ.