ಬಿದರಹಳ್ಳಿಯಲ್ಲಿ ಮಂಡ್ಲಿಕಾನು ಒತ್ತುವರಿ ತೆರವು

rpt forest
ಬಿದರಹಳ್ಳಿ ಗ್ರಾಮದ ಮಂಡ್ಲಿಕಾನು ಒತ್ತುವರಿ ತೆರವುಗೊಳಿಸಿ ಟ್ರಂಚ್ ಹೊಡೆಯುತ್ತಿರುವುದು.
Published on

ರಿಪ್ಪನ್‌ಪೇಟೆ: ಹುಂಚ ಹೋಬಳಿಯ ಬಿದರಹಳ್ಳಿ ಗ್ರಾಮದ ಸರ್ವೇ ನಂ.47ರಲ್ಲಿ ವ್ಯಕ್ತಿಯೊಬ್ಬರು ಮಾಡಿದ ಮಂಡ್ಲಿಕಾನು ಭೂ ಒತ್ತುವರಿಯನ್ನು ಅಧಿಕಾರಿಗಳು ತೆರವುಗೊಳಿಸಿದರು.

ಪೊಲೀಸ್ ಇಲಾಖೆ ನೆರವಿನೊಂದಿಗೆ ಹೊಸನಗರ ತಹಸೀಲ್ದಾರ್ ಮಾರ್ಗದರ್ಶನದಂತೆ ಒತ್ತುವರಿ ಪ್ರದೇಶಕ್ಕೆ ತೆರಳಿದ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಜಾಗದ ಸುತ್ತ ನಿರ್ಮಿಸಿದ್ದ ಬೇಲಿಯನ್ನು ತೆರವುಗೊಳಿಸಿದರು. ಇತ್ತೀಚೆಗೆ ನೆಟ್ಟಿದ್ದ ತೆಂಗಿನ ಗಿಡಗಳನ್ನು ಕಿತ್ತುಹಾಕಿ ಜೆಸಿಬಿ ಮೂಲಕ ಟ್ರಂಚ್ ಹೊಡೆಸಿದ್ದಾರೆ. ಈ ಹಿಂದೆಯೂ ಮಂಡ್ಲಿಕಾನು ಒತ್ತುವರಿ ಮಾಡಲು ಪ್ರಯತ್ನಿಸಿದ್ದ. ಗ್ರಾಮಸ್ಥರ ದೂರಿನ ಮೇರೆಗೆ ಜಿಲ್ಲಾಧಿಕಾರಿ ಆದೇಶದನ್ವಯ ಒತ್ತುವರಿಯನ್ನು ತೆರವುಗೊಳಿಸಲಾಗಿತ್ತು. ಆದರೂ ಅಧಿಕಾರಿಗಳ ಕ್ರಮವನ್ನು ಧಿಕ್ಕರಿಸಿ ಪುನಃ ಅದೇ ಜಾಗದಲ್ಲಿ ಬೇಲಿ ನಿರ್ಮಿಸಿ ತೆಂಗಿನ ಗಿಡಗಳನ್ನು ನೆಟ್ಟಿದ್ದ. ಮತ್ತೊಮ್ಮೆ ಗ್ರಾಮಸ್ಥರು ಅಧಿಕಾರಿಗಳ ಗಮನ ಸೆಳೆದಿದ್ದರಿಂದ ಈಗ ಎರಡನೇ ಬಾರಿ ಒತ್ತುವರಿ ತೆರವುಗೊಳಿಸಿದಂತಾಗಿದೆ.

ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ಸೈಯದ್ ಅಫ್ರೋಜ್ ಅಹಮ್ಮದ್, ಗ್ರಾಮಾಡಳಿತ ಅಧಿಕಾರಿ ಶ್ರೀವಲ್ಲಿ, ಪಿಎಸ್‌ಐ ಪ್ರವೀಣ್, ಡಿಆರ್‌ಎಫ್‌ಒ ಮಂಜುನಾಥ, ಅರಣ್ಯರಕ್ಷಕ ಸಂತೋಷ್‌ಕುಮಾರ್, ಸಿಬ್ಬಂದಿ ದರ್ಶನ, ರಾಘವೇಂದ್ರ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net