

JD Vance: ಯುಕ್ರೇನ್ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಯುರೋಪಿಯನ್ ರಾಷ್ಟ್ರಗಳು ಸಿಂಹಪಾಲು ವೆಚ್ಚವನ್ನು ಪಾವತಿಸಬೇಕಾಗುತ್ತದೆ ಎಂದು ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದರು.
ಈ ಬಗ್ಗೆ ಫಾಕ್ಸ್ ನ್ಯೂಸ್ನಲ್ಲಿ ಮಾತನಾಡಿದ ವ್ಯಾನ್ಸ್, ಅಮೆರಿಕ ಈ ಹೊರೆಯನ್ನು ಹೊರಬಾರದು ಎಂದು ನಾನು ಭಾವಿಸುತ್ತೇನೆ. ಟ್ರಂಪ್ ಖಂಡಿತವಾಗಿಯೂ ಯುರೋಪ್ ಇಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ನಿರೀಕ್ಷಿಸುತ್ತಾರೆ ಎಂದು ತಿಳಿಸಿದ್ದಾರೆ. ಆದರೆ, ಯುಕ್ರೇನ್ನ ಆದ್ಯತೆಗಳಲ್ಲಿ ಒಂದು ರಷ್ಯಾದ ಆಕ್ರಮಣದ ವಿರುದ್ಧ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು. ಟ್ರಂಪ್ ಅಮೆರಿಕದ ಸೈನ್ಯವನ್ನು ನೆಲಕ್ಕೆ ಇಳಿಸುವುದಿಲ್ಲ. ಅಮೆರಿಕದ ವಾಯು ಬೆಂಬಲವನ್ನು ನೀಡಬಹುದು ಎಂದು ಹೇಳಿದ್ದಾರೆ.
ಅಲ್ಲದೆ, ಇದು ಯಾವುದೇ ರೂಪದಲ್ಲಿ ಬಂದರೂ ಪರವಾಗಿಲ್ಲ, ಯುರೋಪಿಯನ್ನರು ಹೆಚ್ಚಿನ ಹೊರೆಯನ್ನು ಹೊರಬೇಕಾಗುತ್ತದೆ. ಇದು ಅವರ ಖಂಡ, ಅದು ಅವರ ಭದ್ರತೆ ಎಂದು ಟ್ರಂಪ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಟ್ರಂಪ್ ಅವರು ಯುರೋಪಿಯನ್ ಮಿತ್ರರಾಷ್ಟ್ರಗಳ ಮೇಲೆ ಹೆಚ್ಚಿನ ವೆಚ್ಚದ ಜವಾಬ್ದಾರಿಯನ್ನು ವರ್ಗಾಯಿಸಲು ಬಯಸುತ್ತಾರೆ ಎಂದು ವ್ಯಾನ್ಸ್ ಹೇಳಿದ್ದಾರೆ
ಯುಕ್ರೇನ್ಗೆ ಇಲ್ಲಿಯವರೆಗೆ ಶತಕೋಟಿ ಡಾಲರ್ಗಳಷ್ಟು US ಮಿಲಿಟರಿ ನೆರವಿನ ಬಗ್ಗೆ ಟ್ರಂಪ್ ಪರೀಕ್ಷೆ ನಡೆಸಿರುವುದರಿಂದ, ಕೈವ್ನ ರಕ್ಷಣೆಗೆ ಹಣಕಾಸು ಒದಗಿಸಲು ವಾಷಿಂಗ್ಟನ್ ಮುಂದುವರಿಸುವುದಿಲ್ಲ ಎಂದು ಶ್ವೇತಭವನ ಹೇಳಿದೆ.
ಯುಕ್ರೇನ್ನಲ್ಲಿ ರಷ್ಯಾ ನಡುವಿನ ಮೂರುವರೆ ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಒಪ್ಪಂದ ಮಾಡಲು ಬಯಸುತ್ತಿದ್ದಾರೆ.(ಏಜೆನ್ಸೀಸ್)