ಫಿಫಾದಲ್ಲಿ ಖಾಸಗಿ ಹೂಡಿಕೆ ಪ್ರಸ್ತಾಪಕ್ಕೆ ಯುರೋಪ್ ವಿರೋಧ: ವಿಶ್ವಕಪ್ ಬಹಿಷ್ಕರಿಸುವುದಾಗಿ ಹಾಲಿ ಚಾಂಪಿಯನ್ ಸ್ಪೇನ್ ಎಚ್ಚರಿಕೆ!

ಫಿಫಾದಲ್ಲಿ ಖಾಸಗಿ ಹೂಡಿಕೆ ಪ್ರಸ್ತಾಪಕ್ಕೆ ಯುರೋಪ್ ವಿರೋಧ: ವಿಶ್ವಕಪ್ ಬಹಿಷ್ಕರಿಸುವುದಾಗಿ ಹಾಲಿ ಚಾಂಪಿಯನ್ ಸ್ಪೇನ್ ಎಚ್ಚರಿಕೆ!
ಫಿಫಾದಲ್ಲಿ ಖಾಸಗಿ ಹೂಡಿಕೆ ಪ್ರಸ್ತಾಪಕ್ಕೆ ಯುರೋಪ್ ವಿರೋಧ: ವಿಶ್ವಕಪ್ ಬಹಿಷ್ಕರಿಸುವುದಾಗಿ ಹಾಲಿ ಚಾಂಪಿಯನ್ ಸ್ಪೇನ್ ಎಚ್ಚರಿಕೆ!
Published on

ಜಿನೀವಾ: ಫಿಫಾ

ಆಯೋಜಿಸುವ ಪುರುಷರ ಹಾಗೂ ಮಹಿಳೆಯರ ಫುಟ್ಬಾಲ್ ವಿಶ್ವಕಪ್ ಜತೆಗೆ ಕ್ಲಬ್ ಟೂರ್ನಿಗಳ ಹೂಡಿಕೆಯ ಷೇರುಗಳನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡುವ ಬಗ್ಗೆ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೋ ಪ್ರಸ್ತಾಪಿಸಿರುವ ಯೋಜನೆಗೆ ಹಾಲಿ ವಿಶ್ವ ಚಾಂಪಿಯನ್ ಸ್ಪೇನ್ ಸಹಿತ ಯೂರೋಪ್‌ನ 55 ರಾಷ್ಟ್ರಗಳ ಯುಇಎಫ್ಎ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿವೆ. ಜತೆಗೆ ಮುಂಬರುವ ಫಿಫಾ ಆಯೋಜನೆಯ ಟೂರ್ನಿಗಳನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದು, ಉತ್ತರ ಅಮೆರಿಕ ಮತ್ತು ಏಷ್ಯಾ ಫುಟ್‌ಬಾಲ್ ಒಕ್ಕೂಟಗಳೂ ಈ ಯೋಜನೆಯನ್ನು ತಿರಸ್ಕರಿಸಿವೆ.

ಫಿಫಾ ಫಾರ್ವರ್ಡ್ ಎಂಟರ್‌ಪ್ರೈಸ್ () ಎಂಬ ಅಂಗ ಸಂಸ್ಥೆ ರಚನೆಯೊಂದಿಗೆ ಮುಂಬರುವ ಫಿಾ ಆಯೋಜಿತ ವಯೋಮಿತಿ, ಕ್ಲಬ್, ವಿಶ್ವಕಪ್ ಸೇರಿ ಇತರ ಕಾರ್ಯಾಚರಣೆಗಳಲ್ಲಿ ಶೇ.20 ಪಾಲನ್ನು ಖಾಸಗಿಯವರಿಗೆ ನೀಡುವ ಯೋಜನೆಯನ್ನು ಫಿಫಾ ಆಡಳಿತ ಮಂಡಳಿ ಗುರುವಾರ ಪ್ರಸ್ತಾಪಿಸಿತ್ತು. ಜತೆಗೆ ಸೆಪ್ಟಂಬರ್ ಮಧ್ಯಭಾಗದೊಳಗೆ ಇದಕ್ಕೆ ಒಪ್ಪಿಗೆ ಸೂಚಿಸಿದರೆ, ಈ ಯೋಜನೆ ಅಡಿ ಫಿಾದ 211 ಸದಸ್ಯ ರಾಷ್ಟ್ರಗಳಿಗೆ ಮುಂದಿನ ಐದು ವರ್ಷಗಳಿಗೆ ತಲಾ 191 ಕೋಟಿ ರೂ. ನೆರವು ಸಿಗಲಿದೆ ಎಂಬ ಭರವಸೆಯನ್ನು ಇನ್‌ಫಾಂಟಿನೋ ನೀಡಿದ್ದರು. ಇದಕ್ಕೆ ಸ್ಪೇನ್, ಪೋರ್ಚುಗಲ್, ಇಂಗ್ಲೆಂಡ್, ಫ್ರಾನ್ಸ್ ಸೇರಿ ಯುಇಎಫ್‌ಎ ಒಕ್ಕೂಟ, ಏಷ್ಯನ್ಒಕ್ಕೂಟದ ಜತೆಗೆ ಮಾಜಿ ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ಫಿಫಾ

ಪ್ರಸ್ತಾಪಿತ ಯೋಜನೆ ಕುರಿತು ತನ್ನ 55 ಸದಸ್ಯ ರಾಷ್ಟ್ರಗಳೊಂದಿಗೆ ಆನ್‌ಲೈನ್‌ನಲ್ಲಿ ತುರ್ತು ಸಭೆ ನಡೆಸಿದ ಯುಇಎ್ಎ, ‘ಕ್ರೀಡೆಯ ಆತ್ಮ’ವನ್ನು ಮಾರಾಟ ಮಾಡಲು ಫಿಫಾ ಮುಂದಾಗಿದ್ದು, ಫುಟ್‌ಬಾಲ್ ಕ್ರೀಡೆಯನ್ನು ಮಾರಾಟ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ಯೋಜನೆ ಜಾರಿಯಾದರೆ, ಫಿಫಾ ಆಯೋಜಿಸುವ ಎಲ್ಲ ಟೂರ್ನಿಗಳನ್ನು ಬಹಿಷ್ಕರಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 5ರಂದು ಪೋಲೆಂಡ್‌ನಲ್ಲಿ 20 ವಯೋಮಿತಿ ಮಹಿಳಾ ವಿಶ್ವಕಪ್ ಆರಂಭಗೊಳ್ಳಲಿದ್ದು, ಫಿಾ ಪ್ರಸ್ತಾಪಿತ ಯೋಜನೆಯಿಂದ ಯುರೋಪಿಯನ್ ರಾಷ್ಟ್ರಗಳ ಭಾಗವಹಿಸುವಿಕೆ ಕುತೂಹಲ ಮೂಡಿಸಿದೆ.
ಟ್ರಂಪ್ ಸಂಬಂಧಿಯ ಹೂಡಿಕೆ?
ಫಾರ್ವರ್ಡ್ ಎಂಟರ್‌ಪ್ರೈಸ್ ಎಂಬ ಹೊಸ ಅಂಗ ಸಂಸ್ಥೆಯು 1.91 ಲಕ್ಷ ಕೋಟಿ ರೂ. ಮೌಲ್ಯ ಹೊಂದಿದ್ದು, ಇದರ ಶೇ.20 ಪಾಲನ್ನು ಖಾಸಗಿಯವರಿಗೆ ನೀಡುವ ಯೋಜನೆ ಇದಾಗಿದೆ. ಆದರೆ, ನ್ಯೂಯಾರ್ಕ್ ಸಂಸ್ಥೆ ಇದರ ಪ್ರಮುಖ ಹೂಡಿಕೆದಾರರಾಗಿದ್ದು, ಈ ಸಂಸ್ಥೆಯು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಳಿಯ ಜೇರಡ್ ಕುಶ್ನರ್ ಅವರ ಸಹೋದರ ಜೋಶುವಾ ಕುಶ್ನರ್ ಅವರದ್ದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net