ಪಾಕಿಸ್ತಾನ ಪರ ಬೇಹುಗಾರಿಕೆ ; 7 ಬಾರಿ ಪಾಕ್​ಗೆ ಭೇಟಿ; ಕಾಂಗ್ರೆಸ್ ನಾಯಕನ ಮಾಜಿ ಸಹಾಯಕ ಬಂಧನ| Arrested

Cyber __Criminals
Published on

ರಾಜಸ್ಥಾನ್: ಪಾಕಿಸ್ತಾನದ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಸರ್ಕಾರಿ ಉದ್ಯೋಗಿ ಮತ್ತು ಹಿರಿಯ ಕಾಂಗ್ರೆಸ್ ನಾಯಕನ ಮಾಜಿ ಸಹಾಯಕ ಶಾಕುರ್ ಖಾನ್ ಮಂಗಳಿಯಾರ್ ರವರನ್ನ ಜೈಸಲ್ಮೇರ್‌ನಲ್ಲಿ ಬಂಧಿಸಲಾಗಿದೆ. ಜೈಪುರದ ರಾಜಸ್ಥಾನ ಗುಪ್ತಚರ ವಿಶೇಷ ತಂಡವು ಖಾನ್ ಅವರನ್ನು ಬುಧವಾರ ರಾಜ್ಯ ಉದ್ಯೋಗ ಕಚೇರಿಯಿಂದ ಬಂಧಿಸಿದೆ.

ರಾಜ್ಯದ ಉದ್ಯೋಗ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಸಕುರ್ ಖಾನ್ ಮಂಗಳಿಯಾರ್ ಅವರನ್ನು ಜೈಸಲ್ಮೇರ್‌ನಲ್ಲಿರುವ ಅವರ ಕಚೇರಿಯಿಂದ ಸಿಐಡಿ ಮತ್ತು ಗುಪ್ತಚರ ಸಂಸ್ಥೆಗಳ ಜಂಟಿ ತಂಡವು ವಶಕ್ಕೆ ಪಡೆದುಕೊಂಡ ನಂತರ, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಜೈಪುರಕ್ಕೆ ವರ್ಗಾಯಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಶಾಕುರ್ ಖಾನ್ ಈ ಮೊದಲು ಕಾಂಗ್ರೆಸ್ ಮಾಜಿ ಸಚಿವ ಶೇಲೆ ಮೊಹಮ್ಮದ್ ಅವರ ಪರ್ಸನಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದ್ದ. ಮೊಹಮ್ಮದ್ ಮತ್ತು ಖಾನ್ ಒಂದೇ ಗ್ರಾಮದವರು ಎಂದು ವರದಿ ತಿಳಿಸಿದೆ.

(ಏಜೆನ್ಸೀಸ್)

ತನಿಖಾಧಿಕಾರಿಗಳು ಅವರ ಮೊಬೈಲ್ ಸಾಧನದಲ್ಲಿ ಹಲವಾರು ಪಾಕಿಸ್ತಾನಿ ಫೋನ್ ಸಂಖ್ಯೆಗಳನ್ನು ಕಂಡು ಹಿಡಿದಿದ್ದಾರೆ. ಕಳೆದ ವರ್ಷಗಳಲ್ಲಿ ಕನಿಷ್ಠ ಏಳು ಬಾರಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ. ಇದು ಮತ್ತಷ್ಟು ಕಳವಳಗಳನ್ನು ಹುಟ್ಟುಹಾಕಿದೆ.

ಮಂಗಳಿಯಾರ್ ಹಾಗೂ ಹಿರಿಯ ಕಾಂಗ್ರೆಸ್ ರಾಜಕಾರಣಿಯ ನಡುವಿನ ಸಂಪರ್ಕದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಿಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ಮಂಗಳಿಯಾರ್ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಗಡಿಯ ಬಳಿಯ ಬರೋಡಾ ಗ್ರಾಮದ ಮೇಲೆ ಹಲವಾರು ವಾರಗಳಿಂದ ಕಣ್ಗಾವಲು ಇರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net