ಈರೋಸ್ ‘ಬ್ರಹ್ಮಾಂಡ’: ಎಐ ನೆರವಿನಿಂದ ಎಂಟು ಲೋಕವನ್ನು ಸೃಷ್ಟಿಸಲು ಮುಂದಾದ ನಿರ್ಮಾಣ ಸಂಸ್ಥೆ

ಈರೋಸ್ ಬಹ್ಮಾಂಡ ಟೀಸರ್ ನ ದೃಶ್ಯ
ಈರೋಸ್ ಬಹ್ಮಾಂಡ ಟೀಸರ್ ನ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಎಂಟು ಬ್ರಹ್ಮಾಂಡಗಳ ತೆರೆ ಮೇಲೆ ತರಲು ಮುಂದಾದ ಈರೋಸ್ ಸಂಸ್ಥೆ
  • ನಂದಿ: ವಾರ್ ಆಫ್ ಕೈಲಾಸ್’ ಮೊದಲ ಸೀಸನ್​ ಸದ್ಯದಲ್ಲೇ ಆರಂಭ
  • ಎಐ ಸಿನಿಮಾಗಳನ್ನು ಘೋಷಿಸಿದ ನಿರ್ಮಾಣ ಸಂಸ್ಥೆ
ಭಾರತೀಯ ಚಿತ್ರರಂಗದಲ್ಲಿ ಆಧುನಿಕ ತಂತ್ರಜ್ಞಾನಗಳಾದ ಎಐ, ಆ್ಯನಿಮೇಷನ್, ವಿಎ್ಎಕ್ಸ್ ಬಳಸಿಕೊಂಡು ಪೌರಾಣಿಕ, ಐತಿಹಾಸಿಕ ಕಥನಗಳನ್ನು ತೆರೆ ಮೇಲೆ ತರುವ ಪ್ರಯತ್ನಗಳಾಗುತ್ತಿವೆ. ಈಗಾಗಲೇ ಹೊಂಬಾಳೆ ಸಂಸ್ಥೆಯು ವಿಷ್ಣು ಅವತಾರದ ಮೇಲೆ ಏಳು ಆ್ಯನಿಮೇಟೆಡ್ ಸಿನಿಮಾಗಳನ್ನು ಘೋಷಿಸಿದ್ದು, ‘ಮಹಾವತಾರ ನರಸಿಂಹ’ ಚಿತ್ರ ಕಳೆದ ವರ್ಷ ರಿಲೀಸ್ ಆಗಿ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಸದ್ಯ ‘ಮಹಾವತಾರ ಪರಶುರಾಮ’ ಸಿದ್ಧತೆಯಲ್ಲಿದೆ. ಇದೇ ಹಾದಿಯಲ್ಲಿ ಇದೀಗ ಮತ್ತೊಂದು ನಿರ್ಮಾಣ ಸಂಸ್ಥೆ ಮುನ್ನಡೆಯುತ್ತಿದ್ದು, ‘ಬ್ರಹ್ಮಾಂಡ’ ಕಥೆಗಳನ್ನು ಹೇಳಲು ಸಿದ್ಧತೆ ನಡೆಸುತ್ತಿದೆ. ಹೌದು, ಪ್ರತಿಷ್ಠಿತ ಈರೋಸ್ ಯೂನಿವರ್ಸ್ ನಿರ್ಮಾಣ ಸಂಸ್ಥೆಯು ಎಐ ನೆರವಿನಿಂದ ಬ್ರಹ್ಮಾಂಡವನ್ನು ಮರುಸೃಷ್ಟಿಸುತ್ತಿದೆ. ಅದಕ್ಕಾಗಿ ಎಂಟು ಲೋಕಗಳನ್ನು ತೆರೆ ಮೇಲೆ ತರಲು ಸಿದ್ಧವಾಗಿದೆ. ಭಾರತೀಯ ಪೌರಾಣಿಕ ಚರಿತ್ರೆಗಳನ್ನು ಮರುವಿನ್ಯಾಸಗೊಳಿಸಿ ವಿಶ್ವಕ್ಕೆ ತೋರಿಸುವುದು ನಿರ್ಮಾಣ ಸಂಸ್ಥೆಯ ಉದ್ದೇಶವಾಗಿದೆ. ಈ ಬ್ರಹ್ಮಾಂಡದಲ್ಲಿ ‘ನಂದಿ: ವಾರ್ ಆಫ್ ಕೈಲಾಸ್’, ‘ದ್ವಾರಕ: ಗೇಟ್‌ವೇ ಟು ದ ಯೂನಿವರ್ಸ್’, ‘ವಿಮಾನ್ ವಾರ್ಸ್‌’, ‘ಮಹಾಭಾರತ 5000 ಎಡಿ’, ‘ಯಕ್ಷಿಣೀಸ್’, ‘ಬ್ರಹ್ಮರಕ್ಷಕ್’, ‘ಗರುಡ’, ‘ಕುಂಭಾಯಣ’ ಹೀಗೆ ಎಂಟು ಲೋಕಗಳನ್ನು ತೆರೆ ಮೇಲೆ ತರಲಿದೆ. ಶೀಘ್ರವೇ ‘ನಂದಿ: ವಾರ್ ಆ್ ಕೈಲಾಸ್’ ಶೂಟಿಂಗ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಟೀಸರ್ ಮೂಲಕ ಘೋಷಿಸಿದೆ. -ಏಜೆನ್ಸೀಸ್

ಎಐನಲ್ಲಿ ‘ಕೊಚಡೈಯಾನ್’

2014ರಲ್ಲಿ ರಿಲೀಸ್ ಆಗಿದ್ದ ರಜಿನಿಕಾಂತ್ ಅಭಿನಯದ ಆ್ಯನಿಮೇಷನ್ ‘ಕೊಚಡೈಯಾನ್’ ಚಿತ್ರವನ್ನು ಎಐ ಮೂಲಕ ಮರುಸೃಷ್ಟಿಸಲು ಈರೋಸ್ ಸಂಸ್ಥೆ ಮುಂದಾಗಿದೆ. ಈ ಹಿಂದೆಯೇ ಇದರ ಬಗ್ಗೆ ೋಷಣೆಯಾಗಿತ್ತು. ಈಗ ಎಐ ಕಾರ್ಯಗಳು ಚುರುಕುಗೊಂಡಿದ್ದು, ಶೀಘ್ರವೇ ಚಿತ್ರದ ಹೊಸ ವರ್ಷನ್ ಬಿಡುಗಡೆಯಾಗಲಿದೆ. ಭಾರತದ ಪ್ರಪ್ರಥಮ ಫೋಟೋರಿಯಲಿಸ್ಟಿಕ್ ಮೋಷನ್ ಪಿಕ್ಚರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಕೊಚಡೈಯಾನ್’ ಚಿತ್ರಕ್ಕೆ ರಜಿನಿಕಾಂತ್ ಪುತ್ರಿ ಸೌಂದರ್ಯ ಆ್ಯಕ್ಷನ್-ಕಟ್ ಹೇಳಿದ್ದರು. ರಜಿನಿಕಾಂತ್ ಜತೆ ದೀಪಿಕಾ ಪಡುಕೋಣೆ ಅಭಿನಯಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net