ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಎಲ್ಲರ ಕರ್ತವ್ಯ

IMG-20250612-WA0066
ಅಂತಾರಾಷ್ಟ್ರೀಯ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದಲ್ಲಿ ಬೈಲುಕುಪ್ಪೆ ಠಾಣಾಧಿಕಾರಿ ಡಿ.ಆರ್. ರವಿಕುಮಾರ್ ಮಾತನಾಡಿದರು. ರವಿ. ಸೋಮಶೇಖರ್ ಇದ್ದರು
Published on

ಬೈಲಕುಪ್ಪೆ: ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವುದು ಎಲ್ಲರ ಆದ್ಯ ಕರ್ತವ್ಯ ಎಂದು ಬೈಲುಕುಪ್ಪೆ ಪೊಲೀಸ್ ಠಾಣಾಧಿಕಾರಿ ಡಿ.ಆರ್.ರವಿಕುಮಾರ್ ತಿಳಿಸಿದರು.

ಬೈಲುಕುಪ್ಪೆ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವ ಕಾರ್ಮಿಕ ಸಂಸ್ಥೆ 2002ರಿಂದ ಪ್ರತಿ ವರ್ಷ ಜೂ.12ರಂದು ಬಾಲಕಾರ್ಮಿಕ ವಿರೋಧ ದಿನವನ್ನಾಗಿ ಆಚರಿಸುತ್ತಿದೆ. ಇದು ಕೇವಲ ಆಚರಣೆಗೆ ಸೀಮಿತವಾಗದೆ ಸಮಾಜದಲ್ಲಿ ನೆಲೆಯೂರಿರುವ ಬಾಲಕಾರ್ಮಿಕರ ಪದ್ಧತಿ ನಿವಾರಣೆಗೆ ನಾವೆಲ್ಲರೂ ಕೈ ಜೋಡಿಸಬೇಕು. ಆಗ ಮಾತ್ರ ಸಮಾಜ ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತವಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ನಂತರ ಎಲ್ಲ ಪೊಲೀಸ್ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪಿಎಸ್‌ಐ ರವಿ, ಎಎಸ್‌ಐ ಸೋಮಶೇಖರ್, ಸಿಬ್ಬಂದಿ ಸುರೇಶ್, ಯೋಗ ಮಹೇಶ್, ಮಂಜು, ಕುಮಾರ್, ಮಧುರಾಜ್, ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net