ವೀರಭದ್ರೇಶ್ವರ ಜಾತ್ರೆ ವಿಜೃಂಭಣೆಯಿಂದ ಆಚರಣೆ

Untitled design(12)
ಸಿದ್ದಾಪುರದಲ್ಲಿ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಪಲ್ಲಕ್ಕಿ ಮೆರವಣಿಗೆಯಲ್ಲಿ ವೀರಗಾಸೆ ನೋಡಿಗರ ಗಮನ ಸೆಳೆಯಿತು.
Published on

ಸಿದ್ದಾಪುರ: ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿದವು.

ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ

ಬೆಳಗ್ಗೆ ದೇವಸ್ಥಾನದಲ್ಲಿ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ, ಪುಷ್ಪಾರ್ಚನೆ ಸೇರಿ ವಿವಿಧ ಧಾರ್ಮಿಕ ಪೂಜಾ ಕೈಂಕಾರ್ಯಗಳು ನಡೆದವು. ಹಿರೇಮಠದ ಮಹೇಶ ತಾತ, ದೇವಸ್ಥಾನದ ಪೂಜಾರಿ ಮಠಪತಿ ರಾಜಶೇಖರ ಸ್ವಾಮಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಬಳಿಕ ದೇವರ ಗೋಪುರ ಕಳಸರೋಹಣ ಕಾರ್ಯಕ್ರಮ ಜರುಗಿತು. ಕುಂಭ, ಕಳಸದೊಂದಿಗೆ ಸುಮಂಗಲೆಯರೊಂದಿಗೆ ವೀರಗಾಸೆ, ನಂದಿಕೊಲು ಕುಣಿತ ಸೇರಿ ಮಂಗಳ ವಾದ್ಯಗಳೊಂದಿಗೆ ಗಂಗೆಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.

ಪಲ್ಲಕ್ಕಿಯಲ್ಲಿ ದೇವರ ಪಂಚಲೋಕ ಮೂರ್ತಿಯನ್ನಿಟ್ಟು ಅದ್ದೂರಿಯಾಗಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಪುನಹ ತರಲಾಯಿತು. ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net