ಜ.1ರಿಂದ ಜೋಗ್‌ಫಾಲ್ಸ್ ಪ್ರವೇಶ ನಿಷಿದ್ಧ

jogfalls
ಜೋಗ್‌ಫಾಲ್ಸ್
Published on

ಕಾರ್ಗಲ್: ಜೋಗ ಜಲಪಾತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಜಲಪಾತದ ಪ್ರವೇಶಕ್ಕೆ ಜ.1ರಿಂದ ನಿಷೇಧ ಹೇರಿ ಆದೇಶಿಸಿದೆ. ಪ್ರತಿವರ್ಷ ಡಿಸೆಂಬರ್ ತಿಂಗಳಿನಲ್ಲಿ ಜಲಪಾತ ನೋಡಲು ಹಲವೆಡೆಗಳಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಆಗಮಿಸುತ್ತಿದ್ದರು. ಆದರೆ ಈ ಬಾರಿ ನಿಷೇಧ ಇರುವುದರಿಂದ ಪ್ರವಾಸಿಗರಿಗೆ ನಿರಾಸೆ ಉಂಟಾಗಲಿದೆ.

ಡಿ.1ರಿಂದ ಡಿ.29ರವರೆಗೆ 82 ಸಾವಿರ ಶಾಲಾ ಮಕ್ಕಳು ಜೋಗ ಜಲಪಾತಕ್ಕೆ ಭೇಟಿ ನೀಡಿದ್ದಾರೆ. 61 ಸಾವಿರ ಮಂದಿ ವಯಸ್ಕರು ಸೇರಿ ಒಟ್ಟು 1.43 ಲಕ್ಷಕ್ಕೂ ಅಧಿಕ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ.

ರಾಜ್ಯದ ಯಾವುದೇ ಮೂಲೆಯಿಂದ ಶೈಕ್ಷಣಿಕ ಪ್ರವಾಸ ಆಯೋಜನೆಗೊಂಡರು ಇತ್ತೀಚಿನ ವರ್ಷಗಳಲ್ಲಿ ಪ್ರವಾಸದ ಪಟ್ಟಿಯಲ್ಲಿ ಜೋಗ ಜಲಪಾತ ಪ್ರಮುಖ ಸ್ಥಾನ ಪಡೆದುಕೊಂಡಿರುವುದು ವಿಶೇಷ.

ನಿಷೇಧದಿಂದ ಇಲ್ಲಿನ ವ್ಯಾಪಾರಕ್ಕೂ ಸಂಕಷ್ಟ ಉಂಟಾಗಲಿದೆ. ಮಾಹಿತಿ ಕೊರತೆಯಿಂದ ಆಗಮಿಸುವ ಪ್ರವಾಸಿಗರಿಗೆ ನಿರಾಸೆ ಆಗಬಾರದು ಎಂದು ಪ್ರವೇಶದ್ವಾರದ ಹೊರಭಾಗದಲ್ಲಿ ತಾತ್ಕಾಲಿಕ ವೀಕ್ಷಣಾ ಸ್ಥಳಕ್ಕಾಗಿ ಪ್ಲಾಟ್‌ಾರ್ಮ್ ನಿರ್ಮಾಣ ಮಾಡಲಾಗಿದೆ. ಈ ಸ್ಥಳದಿಂದ ಜೋಗ ವೀಕ್ಷಿಸುವವರು ಯಾವುದೇ ಶುಲ್ಕ ನೀಡಬೇಕಾಗಿಲ್ಲ ಎಂದು ಜೋಗ್ ನಿರ್ವಹಣಾ ಪ್ರಾಧಿಕಾರದ ವ್ಯವಸ್ಥಾಪಕ ಶ್ರೀನಿವಾಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net