ಚೆಕ್​ಪೋಸ್ಟ್​ನಲ್ಲಿ ಕಾರು ತಡೆದಿದ್ದಕ್ಕೆ ಉದ್ಯಮಿ ಬಿ.ಟಿ. ನಾಗರಾಜ್​ ರೆಡ್ಡಿಯಿಂದ ಪೊಲೀಸರ ಮೇಲೆ ಹಲ್ಲೆ

BT Nagaraj Reddy
Published on

ಮಂಡ್ಯ: ಮಾಜಿ ಎಂಎಲ್​ಸಿ ದಯಾನಂದ ರೆಡ್ಡಿ ಸಹೋದರ ಹಾಗೂ ಉದ್ಯಮಿ ಬಿ.ಟಿ. ನಾಗರಾಜ್​ ರೆಡ್ಡಿ ಅವರು ಚೆಕ್​ಪೋಸ್ಟ್​ನಲ್ಲಿ ಚುನಾವಣಾ ಸೇವಾ ನಿರತ ಪೊಲೀಸರ ಮೇಲೆಯೇ ಹಲ್ಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ

ಈ ಘಟನೆ ಕೆಆರ್​ಎಸ್​ ಸಮೀಪದ ಎಂಎನ್​ಪಿಎಂ ಸರ್ಕಲ್​ ಚೆಕ್​ಪೋಸ್ಟ್​ನಲ್ಲಿ ನಡೆದಿದೆ. ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿರುವ ಮಹೇಂದ್ರ ಗ್ರೂಪ್​ನ ಮಾಲೀಕ ಬಿ.ಟಿ. ನಾಗರಾಜ್ ರೆಡ್ಡಿ ಅವರು ಕಾರನ್ನು ತಡೆದು ತಪಾಸಣೆ ಮಾಡಲು ಪೊಲೀಸರು ಮುಂದಾಗಿದ್ದರು. ಈ ವೇಳೆ ನನ್ನ ಕಾರನ್ನೇ ತಡೆಯುತ್ತೀರಾ ಎಂದು ಪೋಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಮೇಲಾಧಿಕಾರಿಗೆ ಪೋನ್ ಮಾಡು

ಹಲವು ಬಾರಿ ಕಾರಿನ ಚಾಲಕ ಅಡ್ಡಗಟ್ಟಿದರು ಸಹ ಬಿಡದೆ ಪೋಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ನಿಮ್ಮ ಮೇಲಾಧಿಕಾರಿಗೆ ಪೋನ್ ಮಾಡು ಎಂದು ದರ್ಪ ಮೆರೆದಿದ್ದಾರೆ. ಕರ್ತವ್ಯ ನಿರತ ಪೋಲೀಸರ ಮೇಲೆಯೇ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net