ಕೋದಂಡರಾಮ ದೇವಸ್ಥಾನದ ಪ್ರವೇಶೋತ್ಸವ

sor t
ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಪ್ರತಿಷ್ಠಾಪನೆಯಾದ ಶ್ರೀ ಕೋದಂಡರಾಮ ದೇವರ ಶಿಲಾ ಮೂರ್ತಿ.
Published on

ಸೊರಬ: ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಶ್ರೀ ರಾಮ ಸೇವಾ ಆರ್ಯ ಈಡಿಗರ ಸಂಘದಿಂದ ನಿರ್ಮಿಸಲಾದ ಶ್ರೀ ಕೋದಂಡರಾಮ ದೇವಸ್ಥಾನದ ಪ್ರವೇಶೋತ್ಸವ ಹಾಗೂ ಶಿಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಆರಂಭವಾಗಿದ್ದು, ಮೇ 4ರವರೆಗೆ ನೆರವೇರಲಿದೆ.

ಕಲಾ ಮೇಳದೊಂದಿಗೆ ಶ್ರೀ ಕೋದಂಡರಾಮ ದೇವರ ಶೀಲಾ ಮೂರ್ತಿ ದೇಗುಲ ಪ್ರವೇಶಿಸಿತು. ಗುರುವಾರ ಕಲಶ, ನವಗ್ರಹ, ಕ್ಷೇತ್ರಪಾಲ ಪೂಜೆಗಳು, ನವಗ್ರಹ ಹೋಮ ಬಲಿ, ಕ್ಷೇತ್ರಪಾಲ ಬಲಿ, ಶ್ರೀ ಕೋದಂಡರಾಮ ದೇವರ ನೂತನ ಶೀಲಾ ಮೂರ್ತಿಯ ಜಲಾಧಿವಾಸ ಕಾರ್ಯಕ್ರಮ ನೆರವೇರಿತು.

ಮೇ 2ರಂದು ಬೆಳಗ್ಗೆ ಪವಮಾನ ಹೋಮ, ಧಾನ್ಯಾಧಿವಾಸ, ಪುಷ್ಪಾಧಿವಾಸ ನೆರವೇರಲಿದೆ. ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 3ರಂದು ಬೆಳಗ್ಗೆ ಸಂಕಲ್ಪ ಗಣಪತಿ ಪೂಜೆ, ಪುಣ್ಯಾಹವಾಚನ, ಕೌತುಕ ಬಂಧನ, ಅಂಕುರಾರ್ಪಣೆ, ಮಧುಪರ್ಕ, ಯಾಗಶಾಲಾ ಪ್ರವೇಶ, ಸರ್ಪವಿಕಿರಣ, ಕಲಶ ಸ್ಥಾಪನೆ, ಮಂಡಲಾರಾಧನೆ, ಪ್ರತಿಷ್ಟಾಂಗ ಹೋಮ, ಪೂರ್ಣಾಹುತಿ, ಸಂಜೆ ಗಂಗಾಪೂಜೆ ಪ್ರಸಾದ, ವಾಸ್ತುಹೋಮ, ಶಯ್ಯಧಿವಾಸ, ರಾಕ್ಷೋಘ್ನ ಹೋಮ, ಅಷ್ಟಬಂಧ ಪೂಜೆ, ಪಿಂಡಿಕಾಸ್ಥಾಪನೆ ನೆರವೇರಲಿದೆ.

4ರಂದು ಪ್ರತಿಷ್ಠಾಂಗ ಹೋಮ, ನೇತ್ರೋನ್ಮಿಲನ, ಪ್ರಾಣ ಪ್ರತಿಷ್ಠಾಪನೆ, ನಿರೀಕ್ಷಣ ಗೋಪೂಜೆ, ಕಲಾಹೋಮ, ದೇವರಿಗೆ ಅಭಿಷೇಕ, ಅಲಂಕಾರ, ಪೂರ್ಣಾಹುತಿ, ಮಹಾಪೂಜೆ, ಮಹಾನೈವೇದ್ಯ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು.ಧರ್ಮಸ್ಥಳದ ಶ್ರೀರಾಮ ಕ್ಷೇತ್ರ ಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಗರ್ತಿಕೆರೆ ನಾರಾಯಣಗುರು ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕರಾದ ಕುಮಾರ ಬಂಗಾರಪ್ಪ, ರಾಜೀವ್ ಕುಡಚಿ, ಸಿಗಂದೂರು ದೇಗುಲದ ಧರ್ಮದರ್ಶಿ ರಾಮಪ್ಪ, ಶ್ರೀ ರಾಮ ಸೇವಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಧೂಪದ ಬಸವಣ್ಯಪ್ಪ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net