ರೀಲ್ಸ್​ ಮಾಡಿದ್ದೇ ಕಂಟಕವಾಯ್ತಾ! ವಿನಯ್​ ಗೌಡ, ರಜತ್​ ಇಬ್ಬರ ಸ್ನೇಹದ ಮಧ್ಯೆ ಬಿರುಕು | Vinay rajath

Case filed against vinay gowda rajat kishan
Published on

ಮಚ್ಚು ಹಿಡಿದು ರೀಲ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿತ್ತು. ಬಳಿಕ ಮೂರು ದಿನಗಳ ಕಾಲ ಕಸ್ಟಡಿಗೆ ನೀಡಿ, ನಂತರ ಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಎಲ್ಲದರ ಬಗ್ಗೆ ಇದೀಗ ರಜತ್‌ ಮಾತನಾಡಿ, ವಿನಯ್‌‌ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.

Vinay rajath | ಬಿಗ್​ಬಾಸ್ ಮಾಜಿ​ ಸ್ಪರ್ಧಿಗಳಾದ ರಜತ್​ ಕಿಶನ್​ ಹಾಗೂ ವಿನಯ್ ಗೌಡ ನಡುವಿನ ಹತ್ತು ವರ್ಷದ ಗೆಳೆತನದ ಮಧ್ಯೆ ಇದೀಗ ಬಿರುಕು ಮೂಡಿದೆ. ಬಿಗ್​​ಬಾಸ್​ನಿಂದ ಆಚೆ ಬಂದ ಬಳಿಕ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಇಬ್ಬರೂ ಸಹ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೇ ಶೋ ಮಧ್ಯದಲ್ಲಿ ರಜತ್ ಹಾಗೂ ವಿನಯ್ ಗೌಡ ಮಚ್ಚು ಹಿಡಿದುಕೊಂಡು ರೀಲ್ಸ್​ ಮಾಡಿದ್ದರು. ಇದೀಗ ಈ ರೀಲ್ಸ್​ ಇಬ್ಬರ ಸ್ನೇಹದ ಬಿರುಕಿಗೆ ಕಾರಣವಾಗಿದೆ.

ರಜತ್​ ಹೇಳಿದ್ದೇನು?

ವಿನಯ್‌ನನ್ನು ನಾನು ಬಲವಂತವಾಗಿ ಕತ್ತು ಹಿಡಿದು ತಂದು ರೀಲ್ಸ್‌‌ ಮಾಡಿಸಿಲ್ಲ. ರೀಲ್ಸ್​ ಮಾಡಬೇಕು ಅನ್ನೋ ಅವಶ್ಯಕತೆ ಯಾರಿಗೂ ಇಲ್ಲ. ಇಲ್ಲಿ ಯಾರು ವಿನಯ್​ ಗೌಡ ಜೊತೆಗೆ ರೀಲ್ಸ್​ ಮಾಡಬೇಕು ಅಂತ ಕಾಯುತ್ತ ಕುಳಿತಿಲ್ಲ ರೀಲ್ಸ್ ಮಾಡೋಣ ಅಂದು ಮಾಡಿದ್ದು ಅಷ್ಟೇ. ನಾನು ವಿನಯ್ ಫ್ರೆಂಡ್ ಶಿಪ್ ಕಳೆದುಕೊಳ್ಳಲ್ಲ. ವಿನಯ್ ನನ್ನ ಬಗ್ಗೆ ಮಾತನಾಡಿದ್ದು ಇಷ್ಟ ಆಗಿಲ್ಲ ಎಂದು ರಜತ್​ ಹೇಳಿದ್ದಾರೆ. ನಾನು ಈ ಕೇಸ್​ನಿಂದ ವೈಯಕ್ತಿಕವಾಗಿ ಬದಲಾಗಿದ್ದೇನೆ. ಮೊದಲಿಗಿಂತ ಮಾತಾಡೋಡು ಕಡಿಮೆ‌ ಆಗಿದೆ. ಯಾರೂ ಈ ತಪ್ಪನ್ನ ಮಾಡಬೇಡಿ ಅಂತ ರಜತ್​ ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನೂ ಈ ಎಲ್ಲಾ ಪ್ರಕರಣದ ಬಗ್ಗೆ ರಜತ್​ ಕಿಸನ್​ ಪ್ರತಿಕ್ರಿಯಿಸಿದ್ದು, ನಮಗೆ ರೀಲ್ಸ್ ನಿಂದ ಕೇಸ್ ಆಗುತ್ತೆ ಎಂದು ಗೊತ್ತಿರಲಿಲ್ಲ. ಅದರ ಅರಿವು ಕೂಡ ನಮಗೆ ಇರಲಿಲ್ಲ. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಲ್ಲಿ ಇದನ್ನು ಬಳಿಸಿದ್ವಿ. ಅದು ಒರಿಜಿನಲ್ ಮಚ್ಚು ಅಲ್ಲಾ,‌ ಬದಲಾಗಿ ನಾವು ಬಳಸಿದ್ದು ಶೋ ಪ್ರಾಪರ್ಟಿ ಮಚ್ಚು. ಆದರೆ ನನ್ನ ಕಾರಿನಲ್ಲಿ ಫೈಬರ್ ಮಚ್ಚಿತ್ತು, ಅದನ್ನೇ ಬಳಸಿದ್ದೆ ಎಂದಿದ್ದಾರೆ. ಬಳಿಕ ಆ ಮಚ್ಚನ್ನು ಮುರಿದು ಬಿಸಾಕಿದೆ. ಈ ವೇಳೆ ಸೆಟ್​ನಲ್ಲಿದ್ದ ಮಚ್ಚು ಕೊಟ್ಟಿದ್ದು ನಿಜ. ನಾವು ಬಳಸಿದ ಮಚ್ಚನ್ನ ನಾನೇ ಎಸೆದಿದ್ದೆ ಎಂದು ಹೇಳಿದ್ದಾರೆ.

ಇಬ್ಬರ ಮಧ್ಯೆ ಮನಸ್ತಾಪ:

(ಏಜೆನ್ಸೀಸ್)

ನನ್ನ ಹಾಗೂ ವಿನಯ್​ದು 10 ವರ್ಷದ ಗೆಳತನ. ನಾನು ಏನು​ ಎಂಬುದು ವಿನಯ್​ಗೆ ಚೆನ್ನಾಗಿ ಗೊತ್ತಿದೆ. ಹಾಗೆ ವಿನಯ್​ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಯಾರೋ ಮೂರನೇ ವ್ಯಕ್ತಿ ಬಂದು ಹೀಗೆ ಕಾಮೆಂಟ್ಸ್​ ಮಾಡಿದಾಗ ಬಿಟ್ಟು ಬಿಡಬೇಕಾಯ್ತು. ಆದ್ರೆ ಅವನು ನಮ್ಮಿಬ್ಬರ ಸ್ನೇಹವನ್ನು ಬಿಟ್ಟು ಕೊಡಬಾರದಿತ್ತು. ನನಗೆ ಇದು ವ್ಯಯಕ್ತಿಕವಾಗಿ ಬೇಸರ ಆಗಿದೆ. ಆದ್ರೆ ನಾನು ಫೋನ್​ ಮಾಡಿ ಹೀಗೆ ಮಾಡಬಾರದಾಗಿತ್ತು ಅಂತ ಹೇಳಿದಾಗ ಆತ ನನ್ನ ಜೊತೆಗೆ ಮಾತು ಬಿಟ್ಟ. ನನ್ನ ಹಾಗೂ ವಿನಯ್​ ನಡುವೆ ಮನಸ್ತಾಪ ಆಗಿದೆ. ನಾನು ಯಾವತ್ತು ಅವನನ್ನು ಬಿಟ್ಟು ಕೊಟ್ಟಿಲ್ಲ. ಬಿಟ್ಟು ಕೊಡೋದು ಇಲ್ಲ ಎಂದು ರಜತ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net