Anant-Radhika Pre Wedding: ಗೌನ್ ಧರಿಸಿದ ಇಶಾ, ದೀಪಿಕಾ-ರಣ್‌ವೀರ್ ಕೂಡ ರೆಡಿ…ಇಲ್ಲಿವೆ ನೋಡಿ ಸೆಲೆಬ್ರಿಟಿ ಲೇಟೆಸ್ಟ್ ಫೋಟೋಸ್

look
Published on

ಮುಂಬೈ: ಸದ್ಯ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮದ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಸಂಭ್ರಮಾಚರಣೆಯ ಭಾಗವಾಗಲು ಚಿತ್ರರಂಗ ಸೇರಿದಂತೆ ದೇಶ ಮತ್ತು ವಿಶ್ವದ ಅನೇಕ ಪ್ರಸಿದ್ಧ ವ್ಯಕ್ತಿಗಳು ಗುಜರಾತ್‌ನ ಜಾಮ್‌ನಗರ ತಲುಪಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಸಂಭ್ರಮಾಚರಣೆಗೆ ಸಂಬಂಧಿಸಿದ ಪ್ರತಿಯೊಂದು ಅಪ್‌ಡೇಟ್‌ಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಏತನ್ಮಧ್ಯೆ ಸಮಾರಂಭದಲ್ಲಿನ ಅತಿಥಿಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ.

ಇಶಾ ಅಂಬಾನಿ

ಇಶಾ ಅಂಬಾನಿ ತನ್ನ ಸಹೋದರ ಅನಂತ್ ಅಂಬಾನಿ ಮದುವೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಫಂಕ್ಷನ್‌ನಿಂದ ಅವರ ಇತ್ತೀಚಿನ ಫೋಟೋ ಹೊರಬಂದಿದೆ. ಇದರಲ್ಲಿ ಇಶಾ ತುಂಬಾ ಸುಂದರವಾದ ಗೌನ್ ಧರಿಸಿದ್ದಾರೆ. ಇಶಾ ಆಫ್ ಶೋಲ್ಡರ್ ಗೌನ್ ಜೊತೆಗೆ ಭಾರವಾದ ನೆಕ್ಲೇಸ್ ಧರಿಸಿದ್ದಾರೆ. ಅಲ್ಲದೆ ಬನ್ ಹೇರ್ ಸ್ಟೈಲ್ ಮಾಡಿದ್ದಾರೆ.

ರಣವೀರ್-ದೀಪಿಕಾ

ಅಂಬಾನಿಯವರ ಈ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡ ಆಗಮಿಸಿದ್ದಾರೆ. ದಂಪತಿಗಳು ತಮ್ಮ ಇನ್‌ಸ್ಟಾದಲ್ಲಿ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ದೀಪಿಕಾ ಕಪ್ಪು ಬಣ್ಣದ ಶಾರ್ಟ್ ಮಿಡಿ, ರಣವೀರ್ ವೈಟ್ ಡ್ರೆಸ್​​ ಧರಿಸಿದ್ದಾರೆ. ಇಬ್ಬರೂ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಅನಂತ್ ಅಂಬಾನಿ

ವಿವಾಹಪೂರ್ವ ಕಾರ್ಯಕ್ರಮದ ನಡುವೆ ಅನಂತ್ ಅಂಬಾನಿಯ ಮೊದಲ ಲುಕ್ ಬಹಿರಂಗವಾಗಿದೆ. ಒಂದು ಫೋಟೋದಲ್ಲಿ ಅನಂತ್ ಅವರನ್ನು ಕಿತ್ತಳೆ ಬಣ್ಣದ ಕುರ್ತಾ-ಪೈಜಾಮದಲ್ಲಿ ಕಾಣಬಹುದು. ಇದರೊಂದಿಗೆ, ಗಣಪತಿಯ ಬ್ರೂಚ್ ಅನ್ನು ಅವರ ಜಾಕೆಟ್​​​ನಲ್ಲಿ ಧರಿಸಲಾಗಿದೆ.

ಇಶಾ ಅಂಬಾನಿ ಅವರ ಮಾವ

ಇಶಾ ಅಂಬಾನಿ ಅವರ ಮಾವ ಮತ್ತು ಉದ್ಯಮಿ ಅಜಯ್ ಪಿರಮಾಲ್ ಕೂಡ ಆಚರಣೆಯ ಭಾಗವಾದರು. ಅವರ ಫೋಟೋವು ಕಾಣಿಸಿಕೊಂಡಿದೆ, ಇದರಲ್ಲಿ ಅವರು ಕಪ್ಪು ಟುಕ್ಸೆಡೊ ಧರಿಸಿದ್ದಾರೆ.

ಫೋಟೋ ಹಂಚಿಕೊಂಡ ರಿಹಾನ್ನಾ

ಪಾಪ್ ಗಾಯಕಿ ರಿಹಾನ್ನಾ ಕೂಡ ಅಂಬಾನಿ ಸಮಾರಂಭದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾದಲ್ಲಿ ತಂಡದ ಸದಸ್ಯರೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಎಲ್ಲರನ್ನೂ ಹುರಿದುಂಬಿಸುವುದನ್ನು ಕಾಣಬಹುದು. ಮಾರ್ಕ್ ಜುಕರ್‌ಬರ್ಗ್

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅವರೊಂದಿಗೆ ಕಾಣಿಸಿಕೊಂಡರು. ಇಬ್ಬರೂ ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದಾರೆ. ಇಬ್ಬರೂ ಒಟ್ಟಿಗೆ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ. ಜೆನಿಲಿಯಾ ಡಿಸೋಜಾ

ಈ ವಿಶೇಷ ಸಂದರ್ಭದಲ್ಲಿ ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ಕಪ್ಪು ಆಫ್ ಶೋಲ್ಡರ್ ಗೌನ್‌ನಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ಅವರು ತಮ್ಮ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ನಟಿ ಕಪ್ಪು ಬಣ್ಣದ ನೆಕ್‌ಲೈನ್ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಈ ಡೀಪ್‌ನೆಕ್ ಡ್ರೆಸ್‌ನೊಂದಿಗೆ ಕಿಯಾರಾ ಬನ್ ಹೇರ್ ಸ್ಟೈಲ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net