

ರಿಪ್ಪನ್‌ಪೇಟೆ: ಸರ್ವರಲ್ಲಿಯೂ ಧಾರ್ಮಿಕ ಭಾವನೆ ಬೆಳೆಯಬೇಕು. ಶ್ರದ್ಧೆಯಿಂದ ಪೂಜೆ, ಕಾಣಿಕೆ ಸಮರ್ಪಣೆಯಿಂದ ಮಾನಸಿಕ ಕ್ಷೋಭೆ ದೂರವಾಗಿ ಜೀವನೋಲ್ಲಾಸ ವರ್ಧಿಸುತ್ತದೆ ಎಂದು ಹೊಂಬುಜ ಜೈನ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಶ್ರಾವಣ ಮಾಸದ ದ್ವಿತೀಯ ಶುಕ್ರವಾರ ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಸ್ವರ್ಣಾಲಂಕಾರ ಪೂಜೆ ಬಳಿಕ ಆಶೀರ್ವಚನ ನೀಡಿದರು.
ಭಕ್ತರು ಉಡಿ, ಸೀರೆ, ಕಾಣಿಕೆ, ದ್ರವ್ಯಗಳನ್ನು ಅರ್ಪಿಸಿ ಪ್ರಾರ್ಥಿಸಿದರು. ವಿವಿಧ ಲ-ಪುಷ್ಪ, ಸಿಹಿ ನೈವೇದ್ಯವನ್ನು ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ಅರ್ಪಿಸಿದರು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಸರಸ್ವತಿದೇವಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಕ್ಷೇತ್ರಪಾಲರ ಸಾನಿಧ್ಯದಲ್ಲಿ ಪೂಜಾ ವಿಧಿಗಳು ನೆರವೇರಿದವು.